
ಔರಂಗಬಾದ್: ಓದುವ ಪುಟ್ಟ ಮಕ್ಕಳಿಗೆ ಎಷ್ಟೂ ಬಾರಿ ಹೇಳಿಕೊಟ್ರು ಅದು ಮಕ್ಕಳಿಗೆ ತಿಳಿಯುವುದಿಲ್ಲ. ಆದ್ರೆ ಇಲ್ಲೊಬ್ಬಾತ ಮಗಳು ಸಂಖ್ಯೆಗಳನ್ನ ಎಣಿಸಲಿಲ್ಲವೆಂದು ತಾಳ್ಮೆ ಕಳೆದುಕೊಂಡ ತಂದೆ ಈರುಳ್ಳಿ ತಿನ್ನಿಸಿ ಆಕೆ ಸಾವನ್ನಪ್ಪುವಂತೆ ಮಾಡಿದ್ದಾನೆ.
ಮಹಾರಾಷ್ಟ್ರದ ಔರಂಗಬಾದ್ನಲ್ಲಿ ಈ ಘಟನೆ ನಡೆದಿದ್ದು, 6 ವರ್ಷದ ಬಾಲಕಿ ಭಾರ್ತಿ ಸಾವನ್ನಪ್ಪಿದ್ದಾಳೆ. ಜುಲೈ 09 ರಂದು ಈ ಘಟನೆ ನಡೆದಿದ್ದು, ಇಲ್ಲಿನ ಬಾಲಪುರ್ ನಿವಾಸಿ ಸಂಜಯ್ ಎಂಬಾತ ಮಗಳು ಸಂಖ್ಯೆಗಳನ್ನ ಹೇಳಲಿಲ್ಲವೆಂದು ಈರುಳ್ಳಿ ತಿನ್ನಲು ಹೇಳಿದ್ದಾನೆ. ಆದ್ರೆ ಪುಟ್ಟ ಕಂದಮ್ಮ ಈರುಳ್ಳಿ ಬಾಯಿಗೆ ಹಾಕಿಕೊಂಡಿದ್ದು, ಗಂಟಲಿನಲ್ಲಿ ಈರುಳ್ಳಿ ಸಿಕ್ಕಿಹಾಕಿಕೊಂಡ ಕಾರಣ ಉಸಿರುಗಟ್ಟಿ ಆಕೆ ಸಾವನ್ನಪ್ಪಿದ್ದಾಳೆ.
ಮಗಳು ಸಾವನ್ನಪ್ಪಿದ ಬಳಿಕ ಪ್ರಕರಣವನ್ನ ಮುಚ್ಚಿಹಾಕಲು ಈತ ಮನೆಯ ಹಿತ್ತಲಿನಲ್ಲಿ ಮೃತದೇಹವನ್ನ ಮಣ್ಣು ಮಾಡಿದ್ದು ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಪಡೆದ ಔರಂಗಬಾದ್ ಪೊಲೀಸರು ಜುಲೈ 12 ರಂದು ಆರೋಪಿ ತಂದೆ ಸಂಜಯ್ನನ್ನು ಬಂಧಿಸಿದ್ದು, ಜೊತೆಗೆ ಘಟನೆ ವೇಳೆ ಪ್ರತ್ಯಕ್ಷದರ್ಶಿಗಳಾಗಿದ್ದು, ಸಂಜಯ್ಗೆ ಸಹಕರಿಸಿದ್ದಕ್ಕಾಗಿ ಪತ್ನಿ ಹಾಗೂ ಪುತ್ರನನ್ನ ಪೊಲೀಸರು ಬಂಧಿಸಿದ್ದಾರೆ.
Comments are closed.