ಬೆಂಗಳೂರು,ಜು.೧೨-ಕುಖ್ಯಾತ ಕನ್ನ ಕಳವು ಆರೋಪಿ ಪ್ರೇಮ್,ರೌಡಿಪಳನಿ ಸೇರಿ ಮೂವರನ್ನು ಬಂಧಿಸಿರುವ ಕಾಡುಗೋಡಿ ಪೊಲೀಸರು ೧೪ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ
ಬಂಧಿತ ಕನ್ನಗಳ್ಳ ಉತ್ತರಹಳ್ಳಿಯ ಪ್ರೇಮ್ಕುಮಾರ್ ಅಲಿಯಾಸ್ ಪ್ರೇಮ್(೨೧)ಚಂದ್ರ ನಗರದ ಪಳನಿ ಅಲಿಯಾಸ್ ಕರ್ಚಿಪ್ ಪಳನಿ (೩೧) ಶಿವಮೊಗ್ಗದ ವಿದ್ಯಾನಗರದ ಅರವಿಂದ ಕುಮಾರ ಅಲಿಯಾಸ್ ಗುಂಡ(೩೪)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ೧೪ ಲಕ್ಷ ಮೌಲ್ಯದ ೪೦೦ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ರೌಡಿ ಪಳನಿಯ ವಿರುದ್ದ ಸುಬ್ರಮಣ್ಯಪುರ ಅಶೋಕನಗರದಲ್ಲಿ ೧ಕೊಲೆ ಕೊಲೆ ಯತ್ನದ ಪ್ರಕರಣ ಆಡುಗೋಡಿಯಲ್ಲಿ ದೊಂಬಿ ಮತ್ತು ಹಲ್ಲೆಯ ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿ ಪ್ರೇಮ್ ಸುಬ್ರಮಣ್ಯ ಪುರ ಪೊಲೀಸ್ ಠಾಣೆಯ ಸಿಬ್ಬಂದಿಯವರ ಮೇಲೆ ಕಾರು ಹತ್ತಿಸಿ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದು, ಈತನ ವಿರುದ್ದ ನಗರದ ಜೆ,ಪಿ ನಗರ ಪೊಲೀಸ್ ಠಾಣೆಯಲ್ಲಿ ೪ ವಾಹನಗಳವು ಹಾಗೂ ಇತರೆ ಕಳವು ಪ್ರಕರಣಗಳು ಹಾಗೂ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಒಟ್ಟು ೮ ರಾತ್ರಿ ಕನ್ನಕಳವು, ಮನೆಗಳವು, ವಾಹನಗಳವು ಪ್ರಕರಣಗಳು ದಾಖಲಾಗಿರುತ್ತವೆ. ಅಲ್ಲದೆ ಬನಶಂಕರಿ ಪೊಲೀಸ್ ಠಾಣೆಯಲ್ಲಿಯೂ ಸಹ ಈತನ ವಿರುದ್ದ ೨ ರಾತ್ರಿ ಕನ್ನಕಳವು ಪ್ರಕರಣಗಳು ದಾಖಲಾಗಿವೆ.
ಆರೋಪಿ ಅರವಿಂದನ ವಿರುದ್ದ ಶಿವಮೊಗ್ಗದ ದೊಡ್ಡಪೇಟೆಯಲ್ಲಿ ಒಂದು ಕೊಲೆ ಪ್ರಕರಣ ಹಾಗೂ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಒಂದು ಮನೆಗಳವು ಪ್ರಕರಣ ದಾಖಲಾಗಿರುತ್ತೆ. ಅಲ್ಲದೆ ಆರೋಪಿಯು ಕಳವು ಮಾಲುಗಳನ್ನು ಸ್ವಿಕರಿಸಿ ವಿಲೇವರಿ ಮಾಡಿರುತ್ತಾನೆ.
ಆರೋಪಿಗಳ ಬಂಧನದಿಂದ ಹುಳಿಮಾವು,ಭೈಯಪ್ಪನಹಳ್ಳಿ,ಸುಬ್ರಮಣ್ಯಪುರ,ಆರ್.ಟಿ ನಗರದ ಜೆ.ಪಿ ನಗರ ತಲಾ ೧ಕನ್ನಕಳವು ಕೊಲೆ,ಕೊಲೆಯತ್ನ ಪ್ರಕರಣ ಕಾರುಕಳವು ಪ್ರಕರಣಗಳು ಪತ್ತೆಯಾಗಿವೆ.
ಸರಗಳ್ಳರ ಸೆರೆ
ಒಂಟಿ ಮಹಿಳೆಯರ ಸರಗಳವು ಮಾಡುತ್ತಿದ್ದ ಇಬ್ಬರು ಸರಗಳ್ಳರನ್ನು ಬಂಧಿಸಿರುವ ಇದೇ ಪೊಲೀಸರು ಕಾಡುಗೋಡಿ ೩ಲಕ್ಷ ೨೦ ಸಾವಿರ ಮೌಲ್ಯದ ೫ ಚಿನ್ನದ ಚೈನುಗಳ ವಶಪಡಿಸಿಕೊಂಡಿದ್ದಾರೆ.
ಪುಲಿಕೇಶಿನಗರದ ಚಾರ್ಲೆಸ್(೨೭) ಅಪ್ಪು(೨೫) ಬಂಧಿತ ಸರಗಳ್ಳರಾಗಿದ್ದಾರೆ.ಇವರಿಬ್ಬರ ಬಂಧನದಿಂದ ಕಂಟ್ರೋನ್ ಮೆಂಟ್ ಪೊಲೀಸ್ ಠಾಣೆಯ ೨ ಸರಗಳವು ಪ್ರಕರಣಗಳು ಪತ್ತೆಯಾಗಿವೆ ಕಾಡುಗೋಡಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಂದರ್ ಬಾಹರ್
ಜೀವನಭೀಮಾನಗರದ ಮನೆಯೊಂದರಲ್ಲಿಹಣವನ್ನು ಅಂದರ್-ಬಾಹರ್ವಾಡುತ್ತಿದ್ದ ೮ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ೬೨ ಸಾವಿರ ರೂಗಳನಮ್ನು ವಶಪಡಿಸಿಕೊಂಡಿದ್ದಾರೆ
ಆರೋಪಿ ರಮೇಶ ಮನೆ ಬಾಡಿಗೆಗೆ ಪಡೆದು ಹೊರಗಡೆಯಿಂದ ಇಸ್ಪೀಟ್ ಆಡುವ ಪಂಟರ್ಗಳನ್ನು ಕರೆಯಿಸಿ ತಲಾ ೩೦೦ ರೂ ಹಣವನ್ನುಎಂಟ್ರಿ ಹಣವನ್ನಾಗಿ ಪಡೆದುಕೊಂಡು ಅಂದರ್ ಬಾಹರ್ ಜೂಜಾಟ ಆಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.