
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ 54ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಳೆದ ರಾತ್ರಿ ತಮ್ಮ ನಾಗಾರವಾರ ನಿವಾಸದಲ್ಲಿ ಸಾವಿರಾರು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೂಂಡಿದ್ದಾರೆ.
ಈ ವೇಳೆ ಪತ್ನಿ ಗೀತಾ ಶಿವರಾಜ್ಕುಮಾರ್ ಮಕ್ಕಳಾದ ಅನುಪಮಾ ಹಾಗೂ ನಿರುಪಮಾ, ನಟ ವಿನಯ್ ರಾಜ್ಕುಮಾರ್, ನಿರ್ದೇಶಕ ಆರ್ ಚಂದ್ರು, ಶ್ರೀನಗರ ಕಿಟ್ಟಿ ಸೇರಿದಂತೆ ಹಲವಾರು ಕಲಾವಿದರು ಹೂಗುಚ್ಚ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಶ್ರೀಕಂಠ ಸಿನಿಮಾದ ಮೋಶನ್ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಯ್ತು. ಇದೇ ವೇಳೆ ಮಾತನಾಡಿದ ಶಿವಣ್ಣ, ಈ ವರ್ಷದ ಕ್ಲಿಲಿಂಗ್ ವೀರಪ್ಪನ್, ಶಿವಲಿಂಗ ಚಿತ್ರಗಳು ಯಶಸ್ಸನ್ನು ತಂದುಕೂಟ್ಟಿವೆ. ಮುಂದಿನ ದಿನಗಳಲ್ಲಿ ಸಂತೆಯಲ್ಲಿ ನಿಂತ ಕಬೀರ, ಶ್ರೀಕಂಠ, ಟಗರು, ಖದರ್ ಸಿನಿಮಾಗಳು ತೆರೆ ಕಾಣಲಿವೆ ಅಂತಾ ಹೇಳಿದರು.
Comments are closed.