ಮುಂಬೈ

ಝುಕೀರ್‌ ನಾಯ್ಕ್ ಬಂಧನಕ್ಕೆ ಶಿವಸೇನಾ ಆಗ್ರಹ

Pinterest LinkedIn Tumblr

jakir-naik-1ಮುಂಬೈ (ಪಿಟಿಐ): ವಿವಾದಾತ್ಮಕ ಧರ್ಮ ಪ್ರಚಾರಕ ಝಕೀರ್‌ ನಾಯ್ಕ್‌ ಭಾರತಕ್ಕೆ ಮರಳುವ ವೇಳೆ ಆತನನ್ನು ಬಂಧಿಸಬೇಕು ಎಂದು ಶಿವಸೇನಾ ಆಗ್ರಹಿಸಿದೆ.
ಝುಕೀರ್ ನಾಯ್ಕ್ ಸೋಮವಾರ ಮಧ್ಯಾಹ್ನ ಸೌದಿ ಅರೇಬಿಯಾದಿಂದ ಭಾರತಕ್ಕೆ ಮರಳುವ ಸಾಧ್ಯತೆ ಇದೆ.

ಝುಕೀರ್ ಧರ್ಮ ಪ್ರಚಾರದ ಹೆಸರಿನಲ್ಲಿ ದೇಶದ್ರೋಹಿಗಳನ್ನು ಪೋಷಿಸುತ್ತಿದ್ದಾರೆ. ಢಾಕಾ ದಾಳಿಯ ನಂತರ ಅವರ ಮುಖವಾಡ ಕಳಚಿದೆ ಎಂದು ಶಿವಸೇನಾ ಮಖವಾಣಿ ‘ಸಾಮ್ನಾ’ ವರದಿ ಮಾಡಿದೆ.

ಬಾಂಗ್ಲಾ ಹತ್ಯಾಕಾಂಡ ನಡೆಸಿದ ಉಗ್ರನೊಬ್ಬನಿಗೆ ಝುಕೀರ್‌ ಸ್ಫೂರ್ತಿಯಾಗಿದ್ದ ಎಂದು ವರದಿಯಾಗಿದೆ. ಹೀಗಾಗಿ ಝಕೀರ್‌ ನಾಯ್ಕ್‌ ವಿರುದ್ಧ ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ಈ ಆರೋಪವನ್ನು ಅಲ್ಲಗಳೆದಿರುವ ಝುಕೀರ್, ‘ ತಮ್ಮ ಭಾಷಣ ಢಾಕಾದಲ್ಲಿ ಮುಗ್ದರ ಹತ್ಯಾಕಾಂಡಕ್ಕೆ ಕಾರಣವಾಗಿದೆ ಎಂಬುದನ್ನು ಒಪ್ಪುವುದಿಲ್ಲ’ ಎಂದಿದ್ದಾರೆ.

Comments are closed.