ರಾಷ್ಟ್ರೀಯ

ಬಿಹಾರ ಚುನಾವಣೆ ವೇಳೆ ಅಮಿತ್ ಷಾ, ಒವೈಸಿ ರಹಸ್ಯ ಒಪ್ಪಂದ ಮಾಡಿಕೊಂಡಿದ್ದರು!

Pinterest LinkedIn Tumblr

owaisi_amitshahನವದೆಹಲಿ: 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿ (ಯು), ಆರ್ ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಮಹಾಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸಿದ್ದವು. ಇತ್ತ ಬಿಜೆಪಿಯೂ ಮಾಜಿ ಮುಖ್ಯಮಂತ್ರಿ ಜೀತನ್‌ ರಾಮ್‌ ಮಾಂಝಿ ಅವರ ಪಕ್ಷ ಸೇರಿದಂತೆ ಇತರ ಸ್ಥಳೀಯ ಪಕ್ಷಗಳೊಂದಿಗೆ ಕೈ ಜೋಡಿಸಿ ಚುನಾವಣಾ ಕಣಕ್ಕಿಳಿದ್ದಿತ್ತು.

ಆದರೆ ಈ ಹೊತ್ತಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಎಐಎಂಐಎಂ ನಾಯಕ ಮತ್ತು ಪಕ್ಷದ ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಜತೆ ಜತೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದರು ಎಂದು ಗುಜರಾತ್ ಬಿಜೆಪಿ ಮಾಜಿ ಶಾಸಕ ಯತಿನ್ ಓಜಾ ಆರೋಪಿಸಿದ್ದಾರೆ. ಈ ಬಗ್ಗೆ ಜನತಾ ಕಾ ರಿಪೋರ್ಟರ್ ಪತ್ರಿಕೆ ಈ ಹಿಂದೆಯೇ ವರದಿ ಮಾಡಿತ್ತು.

ಓಜಾ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಲು ಇಚ್ಛಿಸಿದ್ದು, ಗುರುವಾರ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಲಾಗುವುದು ಬಲ್ಲಮೂಲಗಳು ವರದಿ ಮಾಡಿವೆ. ಓಜಾ ಅವರು ಈಗಾಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿರುವುದಾಗಿಯೂ ಸುದ್ದಿ ಇದೆ.

ಅಮಿತ್ ಷಾ ಮತ್ತು ಒವೈಸಿ ನಡುವಿನ ರಹಸ್ಯ ಒಪ್ಪಂದದ ಬಗ್ಗೆ ಓಜಾ ಅವರು ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ತಿಳಿಸಿದ್ದು, ಆ ಪತ್ರವೂ ಬಹಿರಂಗವಾಗಿದೆ.

ಬಿಹಾರದಲ್ಲಿ ಮುಸ್ಲಿಂ ಬಹುಮತವಿರುವ ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂಬುದರ ಬಗ್ಗೆ ಒವೈಸಿ ಮತ್ತು ಅಮಿತ್ ಷಾ ಒಪ್ಪಂದ ಮಾಡಿಕೊಂಡಿದ್ದರು. ಅದೇ ವೇಳೆ ಒವೈಸಿ ಅವರು ಕೋಮು ದ್ವೇಷ ಹುಟ್ಟಿಸುವ ಭಾಷಣವನ್ನು ಮಾಡಬೇಕು, ಆ ಭಾಷಣವನ್ನು ಅಮಿತ್ ಷಾ ಅವರೇ ಬರೆಯುತ್ತಾರೆ. ಇದು ಸಮಾಜದಲ್ಲಿ ಕೋಮು ವೈಷಮ್ಯಕ್ಕೆ ಕಾರಣವಾಗುತ್ತದೆ ಎಂದು ಓಜಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Comments are closed.