ಮುಂಬಯಿ : ನಟಿ ಕರೀನಾ ಕಪೂರ್ ಖಾನ್ ಅವರು ಗರ್ಭಿಣಿಯಾದ ಸುದ್ದಿಯನ್ನು ಪತಿ ಸೈಫ್ ಅಲಿ ಖಾನ್ ಅವರು ಬಹಿರಂಗಪಡಿಸುತ್ತಿದ್ದಂತೆ ಬಾಲಿವುಡ್ ವಲಯದಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಬಾಲಿವುಡ್ ಡಾಟ್‌ಕಾಂ ಸೈಫ್ ಅವರ ಮಾಜಿ ಪತ್ನಿ ಅಮೃತಾ ಸಿಂಗ್ ಅವರ ಬಳಿ ಅಭಿಪ್ರಾಯ ಕೇಳಿದ್ದಕ್ಕೆ ಅವರು ಕಿಡಿಕಾರಿದ ಪ್ರಸಂಗ ನಡೆದಿದೆ.
ಈ ನಮೂನೆಯ ಬೇಕಾಬಿಟ್ಟಿ ಪ್ರಶ್ನೆಗಳನ್ನು ಜನರಿಗೆ ಕೇಳುವ ಧೈರ್ಯ ನಿಮಗೆ ಹೇಗೆ ಬಂತು? ಯಾರು ನೀವು ? ನನಗೆ ಪುನಃ ಕರೆ ಮಾಡಬೇಡಿ ಎಂದು ಕಿಡಿಕಾರಿರುವುದಾಗಿ ಬಾಲಿವುಡ್ ಡಾಟ್‌ಕಾಂ ವರದಿ ಮಾಡಿದೆ.
ವಯಸ್ಸಿನಲ್ಲಿ ತನಗಿಂತ 11 ವರ್ಷ ಕಿರಿಯನಾಗಿದ್ದ ಸೈಫ್ ಜೊತೆಗಿನ 13 ವರ್ಷಗಳ ದಾಂಪತ್ಯದಲ್ಲಿ ಅಮೃತಾ ಸಿಂಗ್ ಇಬ್ರಾಹಿಂ ಮತ್ತು ಸರಾ ಎಂಬಿಬ್ಬರು ಮಕ್ಕಳಿಗೆ ತಾಯಿಯಾಗಿದ್ದು 2004 ರಲ್ಲಿ ವಿಚ್ಛೇಧನ ಪಡೆದಿದ್ದರು.
ಪುತ್ರಿ ಸರಾ ಇದೀಗ 23 ರ ಹರೆಯಕ್ಕೆ ಕಾಲಿಟ್ಟಿದ್ದು ಇಬ್ರಾಹಿಂ 16 ರ ಹರೆಯಕ್ಕೆ ಕಾಲಿಟ್ಟಿದ್ದಾನೆ.
-ಉದಯವಾಣಿ
Comments are closed.