ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ 2002ರ ಹಿಟ್ ಆ್ಯಂಡ್ ರನ್ ಕೇಸ್ ನಿಂದ ಮುಕ್ತಿ ಸಿಗುವಂತೆ ತೋರುತ್ತಿಲ್ಲ.
ಇತ್ತೀಚೆಗಷ್ಟೇ ಮಹಿಳೆಯರ ರೇಪ್ ಕುರಿತ ವಿಷಯವಾಗಿ ಹೇಳಿಕೆ ನೀಡಿ ಮಹಿಳೆಯರು ಸೇರಿದಂತೆ ಅನೇಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸಲ್ಮಾನ್ ಖಾನ್ ಅವರನ್ನು ಇದೀಗ ಮತ್ತೆ ಹಳೆಯ ಕೇಸ್ ಹಿಂಬಾಲಿಸುತ್ತಿದೆ. ಒಟ್ಟಿನಲ್ಲಿ ಸಮಸ್ಯೆಗಳ ಸುಳಿಯಲ್ಲೇ ಸಲ್ಮಾನ್ ಜೀವನ ನಡೆಸುತ್ತಿದ್ದಾರೆ ಎನ್ನಬಹುದು.
2002ರ ಗುದ್ದೋಡು( ಹಿಟ್ ಅಂಡ್ ರನ್ ಕೇಸಿ) ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಖಾನ್ ನನ್ನು ಖುಲಾಸೆಗೊಳಿಸಿ ಮುಂಬೈ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪುರಸ್ಕರಿಸಿದೆ.
ನ್ಯಾಯಾಧೀಶರಾದ ಜಗದೀಶ್ ಸಿಂಗ್ ಖೆಹರ್ ಅರನ್ನು ಒಳಗೊಂಡ ನ್ಯಾಯಪೀಠ, ಸಲ್ಮಾನ್ ಹಿಟ್ ಆ್ಯಂಡ್ ರನ್ ಕೇಸಿಗೆ ಸಂಬಂಧಪಟ್ಟಂತೆ ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ನಿರಾಕರಿಸಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು 2002ರಲ್ಲಿ ಮುಂಬೈನ ಬಾಂದ್ರಾದಲ್ಲಿ ಕುಡಿದು ವಾಹನ ಚಲಾಯಿಸಿದ ಪರಿಣಾಮ ಒಬ್ಬ ಮೃತಪಟ್ಟು 4 ಮಂದಿ ಗಾಯಗೊಂಡಿದ್ದರು.
Comments are closed.