ಅಹಮದಾಬಾದ್: ದಢೂತಿ ದೇಹದ ಪತ್ನಿ ಮೆಟ್ಟಿಲಿನಿಂದ ಕಾಲು ಜಾರಿ ಪತಿಯ ಮೈಮೇಲೆ ಬಿದ್ದ ಪರಿಣಾಮ ಪತಿ, ಪತ್ನಿ ಇಬ್ಬರೂ ಸಾವನ್ನಪ್ಪಿರುವ ದುರಂತ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.
68 ವರ್ಷದ ಮಂಜುಳಾ ವಾತ್ಲಾನಿ 128ಕೆಜಿ ತೂಕ ಹೊಂದಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಗ ಆಶೀಶ್ ನನ್ನು ನೋಡಲು ಗಡಿಬಿಡಿಯಿಂದ ಮೆಟ್ಟಿಲು ಹತ್ತುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪತ್ನಿ ಮಂಜುಳಾ ಮೆಟ್ಟಿಲು ಏರುತ್ತಿದ್ದಾಗ ಬೆನ್ನಹಿಂದೆಯೇ ಪತಿ ನಟವರ್ ಲಾಲ್ ಕೂಡಾ ಬರುತ್ತಿದ್ದರು. ಅತಿಯಾದ ಭಾರ ಹೊಂದಿದ್ದ ಪತ್ನಿ ಸಮತೋಲನ ಕಳೆದುಕೊಂಡು ಕಾಲು ಜಾರಿದ ಪರಿಣಾಮ ಪತಿಯ ಮೈಮೇಲೆ ಬಿದ್ದಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.
ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಇಬ್ಬರೂ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
-ಉದಯವಾಣಿ
Comments are closed.