ಕರಾವಳಿ

ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸನ್ಮಾನ, ನೂತನ ತಾಲೂಕು ಪಂಚಾಯತ್ ಅಧ್ಯಕ್ಷರಿಗೆ ಸನ್ಮಾನ

Pinterest LinkedIn Tumblr

yada_sanmana_pic_1

ಮಂಗಳೂರು,ಜುಲೈ.05 : ಯಾದ್ ಫೌಂಡೇಷನ್ ಮಲಾರ್ ಇದರ ಆಶ್ರಯದಲ್ಲಿ ಎರಡನೇ ವರ್ಷದ, ಬಡ ಮಕ್ಕಳ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ,ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ನೂತನ ತಾಲೂಕು ಪಂಚಾಯತ್ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮವು ಪಾವೂರು ಪಂಚಾಯತ್ ಸಮುದಾಯ ಭವನದಲ್ಲಿ ಜರಗಿತು.

ಯಾದ್ ಫೌಂಡೇಷನ್ ಎಂಬ ಸಂಸ್ಥೆಯು ಕಳೆದ ವರ್ಷ ಕೂಡಾ ಸುಮಾರು 170 ಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಂಚಿತ್ತು.ಈ ಬಾರಿ ಸಂಘವು ಎರಡನೇ ವರುಷ ಪೂರೈಸುದರಿಂದ ಈ ಬಾರಿ ಕೂಡಾ ಪಾವೂರು ಗ್ರಾಮದ ಸುಮಾರು 180 ಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಂಚುವ ಕಾರ್ಯಕ್ರಮ ಹಮ್ಮಿಕೊಂಡರು.ಇದಲ್ಲದೆ ಬಡ ಹೆಣ್ಣು ಮಕ್ಕಳ ಮದುವೆ,ರೋಗಿಗಳ ಹಾರೈಕೆ ಮುಂತಾದ ಅನೇಕ ಕಾರ್ಯಕ್ರಮಗಳಲ್ಲಿ ಸಂಘದ ಸದಸ್ಯರು ತಮ್ಮನ್ನು ತಾವು ತೊಡಗಿಸಿಕೊಂಡು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

yada_sanmana_pic_3 yada_sanmana_pic_2

ಇದೇ ಸಂಧರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ವಿಧ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.ಶ್ರೇಷ್ಟ ಸಾಧನೆಗಾಗಿ ಸರಕಾರಿ ಪ್ರೌಢಶಾಲೆ ಇನೋಳಿ ಇಲ್ಲಿನ ಅಧ್ಯಾಪಕ ವೃಂದದರವರನ್ನು ಸನ್ಮಾನಿಸಲಾಯಿತು.

ಅಲ್ಲದೆ ಪಾವೂರು ಗ್ರಾಮದ ಅಭಿವೃದ್ದಿಯ ಹರಿಕಾರ,ಗ್ರಾಮದ ಹೆಮ್ಮಯ ಪ್ರತೀಕ ಜನಾಬ್ ಮೊಹಮ್ಮದ್ ಮೋನುರವರು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸತತ ಎರಡು ವರುಷಗಳ ಕಾಲ ಸಂಘದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ರಿಯಾಝ್ ಗಾಡಿಗದ್ದೆರವರನ್ನು ಕೂಡಾ ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫಿರೋಝ್ ಮಲಾರ್,ಪಜೀರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಭರತ್ ರಾಜ್ ಶೆಟ್ಟಿ,ಪಾವೂರು ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಉಗ್ಗಪ್ಪ ಪೂಜಾರಿ,ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ತಾರ್ ಸಿ.ಎಂ,ಪಾವೂರು ಗ್ರಾಮ ಪಂಚಾಯತ್ ಸದಸ್ಯರಾದ ಹಸನ್ ಎಂ.ಪಿ,ಯುವ ಕಾಂಗ್ರೆಸ್ ಮುಖಂಡರಾದ ಝಕರಿಯ ಮಲಾರ್ ಹಾಗೂ ಪತ್ರಕರ್ತರಾದ ಅನ್ಸಾರ್ ಇನೋಳಿ ಮುಂತಾದವರು ಉಪಸ್ಥಿತರಿದ್ದರು.

Comments are closed.