ಅಂತರಾಷ್ಟ್ರೀಯ

ಕರಿಬೇವಿನಲ್ಲಿದೆ ಚಮತ್ಕಾರ ….!

Pinterest LinkedIn Tumblr

curry leave

ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸುವ ಮೂಲಕ ಯುಗಾದಿಯನ್ನು ಸ್ವಾಗತಿಸುವ ನಮಗೆ ಕಹಿಯ ರೂಪದಲ್ಲಿ ಕರಿಬೇವಿನ ಎಲೆ ಅತಿ ಪವಿತ್ರವಾಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ ’ಒಗ್ಗರಣೆ’ ಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ.

ಕರಿಬೇವು ಸೊಪ್ಪು ಮೂಲತಃ ಒಂದು ಗಿಡಮೂಲಿಕೆ, ಇದು ತನ್ನ ಜೀರ್ಣ ಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಅಯುರ್ವೇದದ ಪ್ರಕಾರ ಕಡಿಪತ್ತಾ ಎಂದು ಕರೆಯಲ್ಪಡುವ ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

೧-೨ ಟೀ ಚಮಚದಷ್ಟು ಎಲೆಯ ರಸವನ್ನು, ೧ಟೀ ಚಮಚ ಲಿಂಬೆಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

ಕರಿಬೇವಿನ ಎಲೆಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಮಾಡಿದ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.

ಸಾಮಾನ್ಯವಾಗಿ ಕೆಲವರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ, ಅಥವಾ ಬೆಳಗಿನ ಜಾವ ಎದ್ದಾಕ್ಷಣ ವಾಕರಿಕೆ, ಅಥವಾ ವಾಂತಿಯ ತೊಂದರೆ ಕಂಡುಬರುತ್ತದೆ. ಇಂತಹ ಸಮಸ್ಯೆ ಎದುರಿಸುವವರು ಪ್ರತಿ ದಿನ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಉತ್ತಮ ಪರಿಣಾಮ ದೊರಕುತ್ತದೆ

ಪ್ರತಿದಿನ ೨-೩ ಬಾರಿ ಸೇವಿಸಿದರೆ, ಆರೋಗ್ಯಕ್ಕೆ ಉತ್ತಮ. ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರಿಗೆ ಕರಿಬೇವು ಸೊಪ್ಪು ಇಷ್ಟವಾಗದಿದ್ದಲ್ಲಿ, ನೀವು ಕರಿಬೇವನ್ನು ರುಬ್ಬಿ, ಕರಿ ಮತ್ತು ಚಟ್ನಿಯಲ್ಲಿ ಬೆರೆಸಬಹುದು. ಬೊಜ್ಜು ಕರಗಿಸಲು ಪ್ರತಿ ಮುಂಜಾನೆ ೮-೧೦ ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಜಜ್ಜಿ ಚೆನ್ನಾಗಿ ಮಿಶ್ರಗೊಳಿಸಿ, ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಂದರೆ, ಕೂದಲು ಆರೋಗ್ಯದಿಂದ ಕೂಡಿರುತ್ತದೆ .

ಸೊಂಟ ನೋವಿಗೆ ಮನೆಮದ್ದು

ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಲ್ಲೂ ಇದೀಗ ಸಾಮಾನ್ಯವಾಗಿ ಕಾಣಿಸುವಂತಹ ಸಮಸ್ಯೆ ಎಂದರೆ ಅದು ಸೊಂಟ ನೋವು. ಹಿಂದೆ ಕೇವಲ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸೊಂಟ ನೋವು, ಇಂದು ೨೦ – ೩೦ವಯಸ್ಸಿನವರನ್ನೂ ಕಾಡುತ್ತಿದೆ. ಇದಕ್ಕೆ ನಮ್ಮ ಬದಲಾದ ಜೀವನ ಶೈಲಿಯೇ ಕಾರಣ ಇರಬಹುದು.
೧.ತೆಂಗಿನ ಎಣ್ಣೆ ಜೊತೆ ಕರ್ಪೂರ ಮಿಕ್ಸ್ ಮಾಡಿ ೫ ನಿಮಿಷ ಕುದಿಸಿ. ನಂತರ ಇದನ್ನು ತಣಿಸಿ ಸ್ಟೋರ್ ಮಾಡಿಡಿ. ಇದನ್ನು ವಾರದಲ್ಲಿ ಎರಡು ಬಾರಿ ಮಲಗುವ ಮುನ್ನ ಸೊಂಟಕ್ಕೆ ಹಚ್ಚಿದರೆ ಉತ್ತಮ.
೨.ಉಗುರುಬಿಸಿ ನೀರಿಗೆ ಅಥವಾ ಬಿಸಿ ನೀರಿಗೆ ನೀಲಗಿರಿ ಎಣ್ಣೆ ಹಾಕಿ, ಅದರಿಂದ ಸ್ನಾನ ಮಾಡಿದರೆ ನೀವು ಸೊಂಟ ನೋವಿನಿಂದ ಸುಲಭವಾಗಿ ಮುಕ್ತಿ ಹೊಂದಬಹುದು.
೩.ನೀವು ತುಂಬಾ ಹೊತ್ತು ಟಿವಿ ನೋಡುತ್ತಿದ್ದರೆ ಸೊಂಟ ಬಳಿ ತಲೆ ದಿಂಬು ಇಟ್ಟು ಅದರ ಮೇಲೆ ಹಾಟ್ ವಾಟರ್ ಬ್ಯಾಗ್ ಇರಿಸಿ. ಇದರಿಂದ ನೋವು ನಿವಾರಣೆಯಾಗುತ್ತದೆ.
೪.ಸ್ನಾನಕ್ಕೆ ಹೋಗುವ ಅರ್ಧಗಂಟೆ ಮುನ್ನ ಸಾಸಿವೆ ಎಣ್ಣೆ ಹಾಕಿ ಮಸಾಜ್ ಮಾಡಿ. ಆದರೆ ಸ್ನಾನ ಮಡುವಾಗ ಮಾತ್ರ ಹಾಟ್ ವಾಟರ್ ಬಳಕೆ ಮಾಡಬೇಕು.
೫.ಸೊಂಟ ನೋವಿನಿಂದ ಮುಕ್ತಿ ಪಡೆಯಲು ನೀವು ಮಾಡಬೇಕಾದ ಮತ್ತೊಂದು ವಿಧಾನ ಎಂದರೆ ಪ್ರತಿ ದಿನ ಹಾಲಿಗೆ ಸ್ವಲ್ಪ ಅರಿಶಿನ, ಎರಡು ಹನಿ ಜೇನು ಹಾಕಿ ಸೇವಿಸಿ.
೬.ಚಹಾದ ಜೊತೆ ಶುಂಠಿ ಹಾಕಿ ಸೇವನೆ ಮಾಡುವುದು ಸಹ ಸೊಂಟ ನೋವಿಗೆ ಮದ್ದು.
೭.ಹರ್ಬಲ್ ಆಯಿಲ್ ಬಳಸಿ ಸೊಂಟಕ್ಕೆ ಮಸಾಜ್ ಮಾಡುವುದು ಉತ್ತಮ.

Comments are closed.