ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭಯೋತ್ಪಾದನೆ ದಾಳಿಯಲ್ಲಿ ಭಾಗಿಯಾದ ಉಗ್ರರಲ್ಲಿ ಒಬ್ಬ ಉಗ್ರ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಯಾಗಿದ್ದ ಎಂದು ತಿಳಿದು ಬಂದಿದೆ. ಆ ಉಗ್ರ ತನ್ನ ಫೇಸ್ಬುಕ್ ಪೇಜ್ನಲ್ಲಿ ಶ್ರದ್ಧಾ ಕಪೂರ್ ಜತೆಗೆ ನಿಂತಿರುವ ವಿಡಿಯೋ ಅಪಲೋಡ್ ಮಾಡಿ ಪೋಸ್ಟ್ ಮಾಡಿರುವುದು ಬಹಿರಂಗವಾಗಿದೆ.
ಢಾಕಾ ದಾಳಿಯಲ್ಲಿ ಪಾಲ್ಗೊಂಡ ಉಗ್ರರಲ್ಲಿ ಆತ ಕೂಡ ಒಬ್ಬನಾಗಿದ್ದ, ನಟಿ ಶ್ರದ್ಧಾ ಕಪೂರ್ ಅಭಿಮಾನಿಯಾಗಿದ್ದ.. ಇದರಿಂದ ಗೊತ್ತಾಗುತ್ತದೆ ನಟಿ ಶ್ರದ್ಧಾ ಕಪೂರ್ ಜತೆ ಕೈ ಮಿಲಾಯಿಸುತ್ತಿರುವುದು ಫೊಟೋದಲ್ಲಿ ಗೊತ್ತಾಗಿದೆ.
2015ರಲ್ಲಿ 4 ಗಂಟೆಯಲ್ಲಿ ಆ ವಿಡಿಯೋವನ್ನ ಅಪಲೋಡ್ ಮಾಡಲಾಗಿತ್ತು. ಅಲ್ಲದೇ 20 ವರ್ಷದ ಉಗ್ರ ಈ ರೀತಿ ಬರೆದುಕೊಂಡಿದ್ದ.. ‘ಫೀಲಿಂಗ್ ಫರಫೆಕ್ಟ್’ ಎಂದು ಹೇಳಿಕೊಂಡಿದ್ದ, ಅಲ್ಲದೇ ಕ್ಯಾಪ್ಶನ್ ಸಮೇತ ಶ್ರದ್ಧಾ ಕಪೂರ್ ಬ್ಯೂಟಿ ಅಂತ ಬರೆದುಕೊಂಡಿದ್ದ.
ಇನ್ನೂ ಆತ ವಿಡಿಯೋವನ್ನು ಎಲ್ಲಿಂದ ತೆಗೆದುಕೊಂಡಿದ್ದ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಈ ವಿಡಿಯೋ ನೋಡಿದ ಮೇಲೆ ಇದು ವೈಯಕ್ತಿಕವಾಗಿ ಭೇಟಿಯಾದುದ್ದಲ್ಲ ಎಂದು ತಿಳಿದು ಬಂದಿದೆ. ಆದ್ರೆ ಯಾವುದೋ ಒಂದು ಕಾರ್ಯಕ್ರಮದ ವೇಳೆ ನಟಿ ಶ್ರದ್ಧಾಳನ್ನು ಆತ ಭೇಟಿ ಮಾಡಿದ್ದ , ಸೋಷಿಯಲ್ ಮೀಡಿಯಾದಲ್ಲಿ ಆತ ಸಕ್ರೀಯವಾಗಿದ್ದ ಎಂದು ತಿಳಿದು ಬಂದಿದೆ.
ಇದಲ್ಲದೇ ಇನ್ನೂ ಕೆಲವು ವಿಡಿಯೋಗಳು ದೊರತಿದ್ದು, ಈತ ಹಲವು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದುಕೊಂಡಿದ್ದ.. ಕೆಲ ಫೊಟೋಗಳನ್ನು ಆತ ಅಪಲೋಡ್ ಮಾಡಿದ್ದ ಆದ್ರೆ ಈತನ ಬಗ್ಗೆ ಯಾವುದೇ ಶಂಕೆ ವ್ಯಕ್ತವಾಗಿರಲಿಲ್ಲ. ಆದ್ರೆ ಆತನಿಗೆ ಬ್ರೇನ್ ವಾಶ್ ಮಾಡಲಾಗಿತ್ತು ಎಂದು ಊಹಿಸಲಾಗಿದೆ.
Comments are closed.