
ಮಂಗಳೂರು. ಜೂ, 04: ಯುಎಇಯಲ್ಲಿ ನಡೆದ ಹೋಲಿ ಕುರ್ಅನ್ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಶಾಫಿ ಸಆದಿಯವರನ್ನು ಶನಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುನ್ನಿ ಸಂಘಟನೆಗಳ ಒಕ್ಕೂಟ ಅಧರದಿಂದ ಸ್ವಾಗತಿಸಿದರು.
ಎಸ್ಸೆಸ್ಸೆಫ್ದ.ಕಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ಮಾತನಾಡಿ, ಯುಎಇಯಲ್ಲಿ ಸರಕಾರ ಕೊಡ ಮಾಡುವ ಹೋಲಿ ಕುರ್ಅನ್ ಅವಾರ್ಡ್ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲ ಕನ್ನಡಿಗರಾಗಿದ್ದಾರೆ ಶಾಫಿ ಸಅದಿ.ಯುಎಇ ಸರಕಾರದ ಅಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಫಿ ಸಅದಿ ಪವಿತ್ರ ಕುರ್ಅನ್ ಪ್ರಶಸ್ತಿ ಪ್ರದಾನದಲ್ಲಿ ಭಾಗವಹಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಗಿದೆ ಎಂದು ಹೇಳಿದರು.

ವಕ್ಪ್ ಮಂಡಳಿ ಸದಸ್ಯರಾದ ಅಬೂಬಕ್ಕರ್ ಸಜೀಪ, ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸಲೀಲ್ ಕುತ್ತಾರ್, ಹನೀಫ್ ಬಜ್ಪೆ, ಮೊದ್ದೀನ್ ಮುಕ್ಕ, ಎಸ್ವೈಎಸ್ ನಾಯಕ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರ ಹ್ಮಾನ್ರಝ್ವಿ ಕಲ್ಕಟ್ಟ, ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಕುಬೈಬ್ ತಂಙಳ್ ಉಳ್ಳಾಲ, ಉಮರ ಮುಂತಾದಲು ಇಲ್ಯಾಸ್ ಉಡುಪಿ, ಹಬೀಬ್ ಬೆಂಗಳೂರು, ಅಬ್ದುಲ್ ರಝಾಕ್ ಕಾವೂರು ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
Comments are closed.