ಅಂತರಾಷ್ಟ್ರೀಯ

ಭಾರೀ ಚರ್ಚೆಗೀಡಾದ ಚುಂಬನಗಳು….ಯಾರು ಯಾರಿಗೆ ನೀಡಿದ್ದು…ಈ ವರದಿ ಓದಿ…

Pinterest LinkedIn Tumblr

kissing

ನೆಲ್ಸನ್ ಮಂಡೇಲಾ- ಶಬಾನಾ ಅಜ್ಮಿ
‘ಸಿಟಿ ಆಫ್ ಜಾಯ್’ ಇಂಗ್ಲಿಷ್ ಚಿತ್ರದಲ್ಲಿ ನಟಿಸಿದ್ದ ಶಬಾನಾ ಅಜ್ಮಿ, ದಕ್ಷಿಣ ಆಫ್ರಿಕದ ಕೇಪ್‌ಟೌನಿಗೆ ಗೌರವ ಪ್ರಶಸ್ತಿ ಸ್ವೀಕರಿಸಲು ಹೋಗಿದ್ದರು. ನೆಲ್ಸನ್ ಮಂಡೇಲಾ ಅವರು ವೇದಿಕೆಯಲ್ಲಿ ಶಬಾನಾಳ ಕೆನ್ನೆಗೆ ಚುಂಬಿಸಿದರು. ಭಾರತದಲ್ಲಿ ಮಂಡೇಲಾ ವಿರುದ್ಧ ಪ್ರತಿಭಟನಾ ಕೂಗು ಕೇಳಿಬಂದಿತ್ತು.

ಶಿಲ್ಪಾ ಶೆಟ್ಟಿ- ರಿಚರ್ಡ್‌ಗೇರ್

kissing1

ಏಡ್ಸ್ ವಿರುದ್ಧದ ಜಾಗೃತಿಗೆಂದು ಭಾರತಕ್ಕೆ ಬಂದಿದ್ದ ಹಾಲಿವುಡ್ ನಟ ರಿಚರ್ಡ್‌ಗೇರ್ ಕಾರ್ಯಕ್ರಮದ ವೇದಿಕೆಯಲ್ಲಿಯೇ ಶಿಲ್ಪಾಶೆಟ್ಟಿಯನ್ನು ಚುಂಬಿಸಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಶಿಲ್ಪಾ ಶೆಟ್ಟಿ ನಗುತ್ತಲೇ ಆ ಮುತ್ತನ್ನು ಸ್ವೀಕರಿಸಿದ್ದರು. ರಿಚರ್ಡ್‌ಗೇರ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು.

 ರಾಖಿ ಸಾವಂತ್- ಮಿಕಾ ಸಿಂಗ್

mika rakhisawant

ಹಿನ್ನೆಲೆ ಗಾಯಕ ಮಿಕಾಸಿಂಗ್ ಒಂದು ಪಾರ್ಟಿಯಲ್ಲಿ ಮಾದಕ ನಟಿ ರಾಖಿ ಸಾವಂತ್‌ಗೆ ಚುಂಬಿಸಿದರು. ‘ಮಿಕಾ ಬಲವಂತವಾಗಿ ನನ್ನನ್ನು ಚುಂಬಿಸಿದ’ ಎಂದು ರಾಖಿ ಈ ಸಂಗತಿಯನ್ನು ದೊಡ್ಡ ವಿವಾದವಾಗಿಸಿದಳು. ಗಾಯಕನ ಅಷ್ಟೂ ದಿನ ಸಾಧನೆಯನ್ನು ಈ ಮುತ್ತು ತೆರೆಗೆ ಸರಿಸಿತ್ತು.

ಕ್ರಿಸ್ಟಿಯಾನೋ ರೊನಾಲ್ಡೋ-ಬಿಪಾಶಾ ಬಸು

ronaldo

ಪೋರ್ಚ್‌ಗಲ್‌ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಪಾರ್ಟಿಯೊಂದರಲ್ಲಿ ಬಾಲಿವುಡ್ ಸುಂದರಿ ಬಿಪಾಶಾ ಬಸುಗೆ ಚುಂಬಿಸಿದರು. ಆದರೆ, ಬಿಪಾಶಾ ‘ರೊನಾಲ್ಡೋ ನನಗೆ ಚುಂಬಿಸಲಿಲ್ಲ. ಕಿವಿಯಲ್ಲಿ ಪ್ರೀತಿಪೂರ್ವಕವಾಗಿ ಏನೋ ಹೇಳಿದರು’ ಎಂದು ತೇಪೆಹಾಕಿದರು. ಆದರೂ ಇದು ಹಾಟ್ ಟಾಕ್ ಆಗಿತ್ತು.

ಮಹೇಶ್ ಭಟ್- ಪೂಜಾ ಭಟ್

mahesh

ಮ್ಯಾಗಜಿನ್‌ವೊಂದರ ಮುಖಪುಟಕ್ಕೆ ತಂದೆ ಪೂಜಾ ಭಟ್, ಮಗಳು ಪೂಜಾ ಭಟ್‌ಗೆ ಕೊಟ್ಟ ಈ ಮುತ್ತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ‘ಹಣದ ಆಸೆಗೆ ಮಹೇಶ್ ಕೌಟುಂಬಿಕ ಸಂಬಂಧಗಳನ್ನೇ ಮಾರಲು ಸಿದ್ಧರಿದ್ದಾರೆ’ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.

ಪದ್ಮಿನಿ ಕೊಲ್ಹಾಪುರೆ- ಪ್ರಿನ್ಸ್ ಚಾರ್ಲ್ಸ್

pri

೧೯೮೦ರ ಸುಮಾರಿನಲ್ಲಿ ಪ್ರಿನ್ಸ್ ಚಾರ್ಲ್ಸ್ ಭಾರತಕ್ಕೆ ಭೇಟಿ ಕೊಟ್ಟಾಗ ಗಾಯಕಿ, ನಟಿ ಪದ್ಮಿನಿ ಕೊಲ್ಹಾಪುರೆ ಸ್ವಾಗತಕ್ಕೆಂದು ನಿಂತಿದ್ದರು. ರಾಜಕುವರನನ್ನು ಕಣ್ತುಂಬಿಕೊಂಡ ಸಂತೋಷದಲ್ಲಿ ಆತನ ಗಲ್ಲ ಹಿಡಿದು ಲೊಚಲೊಚನೆ ಮುತ್ತಿಕ್ಕಿದ್ದರು ಪದ್ಮಿನಿ. ಈ ಮುತ್ತು ಜಾಗತಿಕವಾಗಿಯೇ ಗಮನ ಸೆಳೆದಿತ್ತು.

Comments are closed.