ಕರ್ನಾಟಕ

ಗದಗದಲ್ಲಿ ಬಾಹುಬಲಿ-2 ಶೂಟಿಂಗ್…!

Pinterest LinkedIn Tumblr

bahubali02

ಗದಗ: ದೇಶದಾದ್ಯಂತ ಬಾಹುಬಲಿ 1 ಸೃಷ್ಟಿಸಿದ ಕ್ರೇಜ್, ಗಲ್ಲಾಪೆಟ್ಟಿಯ ಲೂಟಿ ಎಲ್ಲವೂ ಗೊತ್ತೇ ಇದೆ. ಅದರಂತೆ, ಬಾಹುಬಲಿ 2ರ ಚಿತ್ರೀಕರಣ ಭರದಿಂದ ಸಾಗಿದೆ ಅನ್ನೋ ಸುದ್ದಿ ಆಗಾಗ್ಗೆ ಕಿವಿಗೆ ಬೀಳ್ತಿರುತ್ತೆ.

ಕರ್ನಾಟಕ ಮೂಲದ ರಾಜಮೌಳಿ ನಿರ್ದೇಶನದ ಹಲವು ಚಿತ್ರಗಳು ಕನ್ನಡದ ನೆಲದಲ್ಲಿ ನಡೆದಿವೆ. ಅದರಂತೆ ಬಾಹುಬಲಿ 2 ಚಿತ್ರದ ಚಿತ್ರೀಕರಣವೂ ಗದಗ್‍ನಲ್ಲಿ ಗುಪ್ತವಾಗಿ ನಡೆದಿದೆ ಅನ್ನೋ ಸುದ್ದಿ ಹಬ್ಬಿದೆ. ನೀಲಗುಂದ, ಗಜೇಂದ್ರಗಡ ಹಾಗೂ ಕಪ್ಪತಗುಡ್ಡದಲ್ಲಿ ಶೂಟಿಂಗ್‍ಗೆ ಸ್ಥಳ ಪರಿಶೀಲನೆ ಮಾಡಿದ್ದಾರೆ ಅನ್ನೋದು ಒಂದ್ಕಡೆಯಾದ್ರೆ, ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿ ಹೋಗಿದೆ ಅನ್ನೋದು ಮತ್ತೊಂದು ಮಾತು. ಇನ್ನು, ಬಾಹುಬಲಿ ಚಿತ್ರೀಕರಣ ಇಲ್ಲಾದ್ರೆ ಸಂಪೂರ್ಣ ಬೆಂಬಲ ನೀಡ್ತೀವಿ ಅಂತಾರೆ ಇಲ್ಲಿನ ಸ್ಥಳೀಯರು.

ಗದಗ್ ನೀಲಗುಂದ ಗುಡ್ಡದಲ್ಲಿ ಮಹಾಭಾರತ ಇತಿಹಾಸ ಸಾರುವ ಅನೇಕ ಕುರುಹುಗಳಿವೆ. ಬೃಹದಾಕಾರದ ಬೆಟ್ಟದಲ್ಲಿನ ಕಲ್ಲು ಬಂಡೆಗಳು ಬಾಹುಬಲಿ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ. ಬೆಟ್ಟದ ಮೇಲಿ ತ್ರಿಲಿಂಗು ದೇವಸ್ಥಾನವಿದ್ದು, ಪಾಂಡವರು ಈ ಲಿಂಗವನ್ನು ಸ್ಥಾಪಿಸಿ ಪೂಜಿಸುತ್ತಿದ್ದರು ಎನ್ನಲಾಗಿದೆ. ಇದೆಲ್ಲಾ ಕುರುಹುಗಳು ಬಾಹುಬಲಿ-2 ಚಿತ್ರಕ್ಕೆ ಪೂರಕವಾಗಿದೆ ಅಂತ ಜನ ಮಾತಾಡಿಕೊಳ್ತಿದ್ದಾರೆ. ಆದ್ರೆ, ಬಾಹುಬಲಿ ಚಿತ್ರತಂಡ ಭೇಟಿನೀಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂತಿದ್ದಾರೆ ಇಲ್ಲಿಯ ಮಠದ ಸ್ವಾಮೀಜಿ.

ಒಟ್ಟಿನಲ್ಲಿ ಬಾಹುಬಲಿ ಚಿತ್ರದ ಕೆಲ ಭಾಗಗಳು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡಿದ್ಯಾ ಅನ್ನೋದಕ್ಕೆ ನಿರ್ದೇಶಕರಾದ ರಾಜ್‍ಮೌಳಿಯೇ ಉತ್ತರಿಸಬೇಕು.

Comments are closed.