ಮನೋರಂಜನೆ

‘ಸುಲ್ತಾನ್’ ಚಿತ್ರಕ್ಕಾಗಿ ಪ್ರಚಾರ ಮಾಡಿದ ಸಲ್ಲು ಸಹೋದರಿ ಅರ್ಪಿತಾ

Pinterest LinkedIn Tumblr

sultanಮುಂಬೈ: ಸಲ್ಮಾನ್ ಮುಂಬರುವ ಚಿತ್ರ ‘ಸುಲ್ತಾನ್’ ಚಿತ್ರಕ್ಕಾಗಿ ಅರ್ಪಿತಾ ಖಾನ್ ತಮ್ಮದೇ ಆದ ಸ್ಟೈಲ್‌ಲ್ಲಿ ಚಿತ್ರದ ಪ್ರಚಾರ ಮಾಡಿದ್ದಾರೆ. ಮಿಲಿಯನ್ ಜನರ ಮನಗೆದ್ದಿರುವ ಸುಲ್ತಾನ್ ಚಿತ್ರ ಎಲ್ಲೆಡೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಪಿತಾ ಸುಲ್ತಾನ್ ಚಿತ್ರಕ್ಕಾಗಿ ‘ಬೀಯಿಂಗ್ ಹ್ಯೂಮೆನ್’ ಅಂತ ಶರ್ಟ್ ಮೇಲೆ ಬರೆದು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

‘ಬೀಯಿಂಗ್ ಸುಲ್ತಾನ್ ಎಂಬ ಅರ್ಥದಲ್ಲಿ ಬೀಯಿಂಗ್ ಹ್ಯೂಮೇನ್’ ಅಂತ ಅರ್ಪಿತಾ ಟ್ವಿಟ್ ಮಾಡಿದ್ದಾಳೆ.

ಈದ್ ಹಬ್ಬದಂದು ಚಿತ್ರ ರಿಲೀಸ್ ಆಗುತ್ತಿದೆ. ಸಲ್ಮಾನ್ ಸುಲ್ತಾನ್ ಚಿತ್ರ ಬಿಡುಗಡೆಗಾಗಿ ತುಂಬಾ ಎಕ್ಸೈಟ್ ಆಗಿದ್ದಾರೆ. ಇನ್ನೂ ಸುಲ್ತಾನ್ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಅಭಿಮಾನಿಗಳಲ್ಲಿ ಚಿತ್ರದ ಸಾಂಗ್ ಕುರಿತು ನಿರೀಕ್ಷೆ ಹೆಚ್ಚಿದೆ. ಚಿತ್ರದ ಸಾಂಗ್ ನೋಡಿದ್ರೆ ಸಲ್ಮಾನ್ ಹಾಗೂ ಅನುಷ್ಕಾ ಶರ್ಮಾರ ಡ್ಯಾನ್ಸಿಂಗ್ ಸ್ಕಿಲ್ಸ್ ಅದ್ಭುತವಾಗಿ ಮೂಡಿ ಬಂದಿದೆ.

ಅಲ್ಲದೇ ಸಾಂಗ್ ಕಂಪೋಸ್ ಮಾಡಿದ್ದಾರೆ ವಿಶಾಲ್ ದಾದಲಾನಿ ಹಾಗೂ ಶೇಖರ್ ರವಿಜಾನಿ.. ಸುಲ್ತಾನ್ ಚಿತ್ರದ ಈ ಹಾಡು ಕೇಳುಗರನ್ನು ಮೋಡಿ ಮಾಡುವುದಂತು ಸುಳ್ಳಲ್ಲ. ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ಸಾಕಷ್ಟು ತರಬೇತಿ ಪಡೆಯುತ್ತಿದ್ದಾರಂತೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ.

Comments are closed.