ಅಂತರಾಷ್ಟ್ರೀಯ

ಒಳ್ಳೆಯ ಭಯೋತ್ಪಾದನೆ ಕೆಟ್ಟ ಭಯೋತ್ಪಾದನೆ ಬಗ್ಗೆ ಪಾಕ್ ನಿಂದ ಮತ್ತೆ ತಾರತಮ್ಯ: ಪಾಕ್ ಪತ್ರಿಕೆ

Pinterest LinkedIn Tumblr

pakistan-2ಇಸ್ಲಾಮಾಬಾದ್: ಭಯೋತ್ಪಾದನೆ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಪಾಕಿಸ್ತಾನಕ್ಕೆ ಅಲ್ಲಿನ ಪತ್ರಿಕೆಯೊಂದು ಸರ್ಕಾರವನ್ನು ಆಗ್ರಹಿಸಿದ್ದು, ಮತ್ತೆ ಪಾಕಿಸ್ತಾನ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಬಗ್ಗೆ ತಾರತಮ್ಯ ಮಾಡುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಭದ್ರತೆ, ಇಲ್ಲಿನ ಸರ್ಕಾರ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂದು ಡಾನ್ ಪತ್ರಿಕೆ ಅಭಿಪ್ರಾಯಪಟ್ಟಿದೆ. ಇದೆ ವೇಳೆ ಪಾಕಿಸ್ತಾನ ಪ್ರಧಾನಿಯ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು ಟೀಕಿಸಿರುವ ಡಾನ್ ಪತ್ರಿಕೆ ಹಕ್ಕಾನಿ ಉಗ್ರ ಸಂಘಟನೆ ಬಗ್ಗೆ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಸರ್ತಾಜ್ ಅಜೀಜ್ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಸರ್ತಾಜ್ ಅಜೀಜ್ ಸಮರ್ಥನೆಯ ಪರಿಣಾಮವಾಗಿ ಪಾಕಿಸ್ತಾನ ಮತ್ತೆ ಭಯೋತ್ಪಾದನೆ ಬಗ್ಗೆ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬ ತಾರತಮ್ಯ ಅನುಸರಿಸುತ್ತಿದೆ ಎಂದು ಡಾನ್ ಟೀಕಿಸಿದೆ. ಪಾಕಿಸ್ತಾನ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬ ತಾರತಮ್ಯವನ್ನು ಬಿಟ್ಟರೆ ಮಾತ್ರ ಇಲ್ಲಿನ ಭದ್ರತೆ ಉತ್ತಮಗೊಳ್ಳಲು ಸಾಧ್ಯ ಎಂದು ಡಾನ್ ಪತ್ರಿಕೆ ಅಭಿಪ್ರಾಯಪಟ್ಟಿದೆ.

Comments are closed.