ರಾಜಸ್ಥಾನ: ಸಹೋದರನ ಸಾವಿನಿಂದ ಮನನೊಂದ ಯುವತಿಯೊಬ್ಬಳು ಉರಿಯುತ್ತಿರುವ ಬೆಂಕಿಗೆ ಹಾರಿದ ಘಟನೆ ರಾಜಸ್ಥಾನದ ಡುಂಗರಪುರ್ ಜಿಲ್ಲೆಯಲ್ಲಿ ನಡೆದಿದೆ. ಸಹೋದರನ ಸಾವಿನ ಶೋಕದಲ್ಲೇ ಮನನೊಂದಿದ್ದ 28 ವರ್ಷದ ಯುವತಿ, ಉರಿಯುತ್ತಿರುವ ಚಿತೆಗೆ ಹಾರಿ ಸಾವನ್ನಪ್ಪಿರುವುದು ವರದಿಯಾಗಿದೆ.
ಮೂರು ವರ್ಷದ ಹಿಂದೆ ಮೂರು ಮಕ್ಕಳ ಜತೆಗೆ ಮಹಿಳೆಯೋರ್ವಳು ವಾಸಿಸುತ್ತಿದ್ದಳು. ತನ್ನ ಮಕ್ಕಳಾದ ದುರ್ಗಾ ಹಾಗೂ ವೆಲರಾಮ್, ಮನ್ನಾತ್ ಜತೆಗೆ ವಾಸವಿದ್ದಳು.
ವೆಲರಾಮ್ಗೆ ರಸ್ತೆ ಅಪಘಾತದಲ್ಲಿ ಗಾಯವಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ವೆಲರಾಮ್ ಸಾವನ್ನಪ್ಪಿದ್ದ. ನಿನ್ನೆ ಆತನ ಅಂತ್ಯಕ್ರಿಯೆ ನಡೆಸಲಾಗಿತ್ತು.
ಮಂದ ಬುದ್ಧಿಯವಳಾಗಿದ್ದ ದುರ್ಗಾ ಸಹೋದರನ ಸಾವಿನಿಂದ ನೊಂದಿದ್ದಳು ಎನ್ನಲಾಗಿದೆ. ಎಲ್ಲರೂ ಅಂತ್ಯಕ್ರಿಯೆ ಮುಗಿಸಿ ಮನೆಗೆ ತೆರಳಿದ್ದಾರೆ. ಆದ್ರೆ ಅಲ್ಲಿಯೇ ಇದ್ದ ದುರ್ಗಾ ಸಹೋದರನ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಇದೇ ವೇಳೆ ಅಲ್ಲೇ ಸ್ಥಳೀಯ ವ್ಯಕ್ತಿಯೊಬ್ಬ ನೆರೆಹೊರೆಯವರಿಗೆ ತಿಳಿಸಿದ್ದಾನೆ. ಬಳಿಕ ನೆರೆಮನೆಯವರು ಬಂದು ನೋಡಿದಾಗ ಯುವತಿ ಮೃತಪಟ್ಟಿರುವುದು ಗೊತ್ತಾಗಿದೆ.
Comments are closed.