ಬೆಂಗಳೂರು: ಮ್ಯೂನಿಚ್ ನಗರ ಮಾದರಿಯ “ಸೇಫ್ ಸಿಟಿ’ ವ್ಯವಸ್ಥೆಯನ್ನು ರಾಜಧಾನಿ ಬೆಂಗಳೂರಿನಲ್ಲಿಯೂ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಯಕರ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದು, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು “ಸೇಫ್ ಸಿಟಿ’ ಯೋಜನೆಯ ಪ್ರಮುಖ ಗುರಿ ಎಂದು
ಹೇಳಿದರು.
ಅಪರಾಧ ನಿಯಂತ್ರಣ, ಸೈಬರ್ ಅಪರಾಧ ತಡೆ, ಮಹಿಳೆಯರು, ಮಕ್ಕಳು, ಹಿರಿಯ ನಾಯಕರ ಭದ್ರತೆ, ಸಾರ್ವಜನಿಕ ಸ್ನೇಹಿ ಪೊಲೀಸಿಂಗ್‌ಗೆ ಸಂಬಂಧಿಸಿದಂತೆ ಮ್ಯೂನಿಚ್ ಸಿಟಿಯಲ್ಲಿ “ಸೇಫ್ ಸಿಟಿ’ ವ್ಯವಸ್ಥೆ ಜಾರಿಯಲ್ಲಿದ್ದು ಯಶಸ್ವಿಯೂ ಆಗಿದೆ. ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ಇಲ್ಲಿ ಕರೆಸಿ ನಮ್ಮ ಪೊಲೀಸರಿಗೆ ತರಬೇತಿ ಕೊಡಿಸುವುದು ಹಾಗೂ ನಮ್ಮ ಪೊಲೀಸ್ ಅಧಿಕಾರಿಗಳನ್ನು ಮ್ಯೂನಿಚ್ ನಗರಕ್ಕೆ ಕಳುಹಿಸಿ ಅಲ್ಲಿನ ವ್ಯವಸ್ಥೆ ತಿಳಿದುಕೊಳ್ಳುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಮ್ಯೂನಿಚ್ ನಗರದಲ್ಲಿ ಶೇ. 87 ಜನರು ಪೊಲೀಸ್ ವ್ಯವಸ್ಥೆ ಮತ್ತು ಸಿಬ್ಬಂದಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ಅಲ್ಲಿನ ಪೊಲೀಸ್ ಅಧಿಧಿಕಾರಿಗಳು ಶಾಲೆಗಳಿಗೆ ತೆರಳಿ ಮಕ್ಕಳಿಗೆ ಕಾನೂನು ತಿಳಿವಳಿಕೆ ನೀಡುತ್ತಾರೆ. ಈ ಅಂಶ ತಮಗೆ ವಿಶೇಷ ಪ್ರೇರಣೆ ನೀಡಿದ್ದು, ನಮ್ಮ ಮಕ್ಕಳಿಗೆ “ಕಳ್ಳ -ಪೊಲೀಸ್’ ಭೋದನೆ ಬದಲಿಗೆ ಇಂತಹ ಸದಾಭಿಪ್ರಾಯ ಮೂಡಿಸಬೇಕಿದೆ ಎಂದು ಹೇಳಿದರು.
ಮ್ಯೂನಿಚ್ ನಗರದಲ್ಲಿ ಪೊಲೀಸ್ ತರಬೇತಿಯೂ ವಿಶಿಷ್ಟವಾಗಿದ್ದು, ಗೃಹ ಕಲಹ, ಕೊಲೆ ಮತ್ತಿತರ ಪ್ರಕರಣಗಳನ್ನು ಪೊಲೀಸರು ಯಾವ ರೀತಿ ನಿರ್ವಹಣೆ ಮಾಡಬೇಕೆಂಬ ಮಾದರಿ ಸಿದಟಛಿಪಡಿಸಲಾಗಿದೆ ಎಂದು ತಿಳಿಸಿದರು. ಒಟ್ಟಾರೆ ನಮ್ಮಲ್ಲೂ ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದರ ಜತೆಗೆ ಪೊಲೀಸರ ಬಗ್ಗೆ ನಮ್ಮಲ್ಲಿ ಯಾವ ಅಭಿಪ್ರಾಯವಿದೆ ಎಂಬ ಕುರಿತು ಐಸಾಕ್ ನಂತಹ ಸಂಸ್ಥೆ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಇದೆ ಎಂದು ತಿಳಿಸಿದರು.
ಬವೇರಿಯಾ ರಾಜ್ಯದ ಅಹ್ವಾನದ ಮೇರೆಗೆ ತಾವು ಡಿಜಿಪಿ, ಎಡಿಜಿಪಿ, ಡಿಐಜಿ,ಎಸ್‌ಪಿ ಮಟ್ಟದ
ಅಧಿಕಾರಿಗಳನ್ನೊಳಗೊಂಡ ನಿಯೋಗದೊಂದಿಗೆ ಪ್ರವಾಸ ಕೈಗೊಂಡಿದ್ದೆ. ಈ ಸಂದರ್ಭದಲ್ಲಿ ಪೊಲೀಸ್
ಹಾಗೂ ಸಂಚಾರ ವ್ಯವಸ್ಥೆ ಸುಧಾರಣೆ ಬಗ್ಗೆ ಒಪ್ಪಂದ ಸಹ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು. ಜರ್ಮನಿಯ ಬವೇರಿಯಾ ರಾಜ್ಯದ ಜತೆ ಕರ್ನಾಟಕ ಸರ್ಕಾರ 2007ರಿಂದಲೇ ವ್ಯಾಪಾರ, ಕೈಗಾರಿಕೆ ಕ್ಷೇತ್ರಗಳಲ್ಲಿ ನಂಟು ಹೊಂದಿದ್ದು, ಇದೀಗ ಪೊಲೀಸ್ ಹಾಗೂ ಸಂಚಾರ ವ್ಯವಸ್ಥೆ ಬಗ್ಗೆಯೂ ಪರಸ್ಪರ ಸಹಕಾರ ಮುಂದುವರಿಯಲಿದೆ ಎಂದು
ಹೇಳಿದರು.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಯೂರೋಪ್ ಮಾದರಿ ವ್ಯವಸ್ಥೆ ಆಳವಡಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಈಗಿರುವ ವ್ಯವಸ್ಥೆ ಮತ್ತಷ್ಟು ಸುಧಾರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಏನಿದು ಮ್ಯೂನಿಚ್ ಮಾದರಿ?
ಮ್ಯೂನಿಚ್ ಜರ್ಮನಿಯ ಒಂದು ನಗರ. ಈ ನಗರದಲ್ಲಿ ಪೊಲೀಸರು ಕೈಗೊಂಡಿರುವ ಸುರಕ್ಷತಾ ಕ್ರಮಗಳು ವಿಶ್ವದಲ್ಲೇ ಪ್ರಸಿದಟಛಿವಾಗಿವೆ. ನಾಗರಿಕರ ಸುರಕ್ಷೆ, ಸಂಚಾರ ವ್ಯವಸ್ಥೆಯಲ್ಲಿ ಅತ್ಯುತ್ತಮ ಕ್ರಮಗಳನ್ನು ಕೈಗೊಂಡಿದ್ದಾರೆ. ಇಲ್ಲಿನ ಪೊಲೀಸರು ಸ್ವಂತ ಹೆಲಿಕಾಪ್ಟರ್ ಕೂಡ ಹೊಂದಿದ್ದಾರೆ. ಗಸ್ತು ವ್ಯವಸ್ಥೆಗೆ ದುಬಾರಿ ಬಿಎಂಡಬ್ಲೂ, ಆಡಿ, ವೋಕ್ಸ್
ವ್ಯಾಗನ್ ಕಾರುಗಳನ್ನು ಬಳಸುತ್ತಾರೆ.
200 ಮಂದಿ ಗಡೀಪಾರು
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೃಷ್ಟಿಸುತ್ತಿರುವ ಅವಾಂತರದ ಹಿನ್ನೆಲೆಯಲ್ಲಿ ಅಕ್ರಮವಾಗಿ ನೆಲೆಸಿರುವವರ ಪತ್ತೆಗೆ ತ್ವರಿತ ಕ್ರಮ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್ ಹೇಳಿದರು. ಈಗಾಗಲೇ 1,500 ಅಕ್ರಮ ವಾಸಿಗಳ ಪಟ್ಟಿ ಮಾಡಲಾಗಿದೆ. ಅಲ್ಲದೇ ಸುಮಾರು 200 ಜನರನ್ನು ದೇಶದಿಂದ ಗಡಿಪಾರು ಮಾಡಲಾಗಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿವರಗಳನ್ನು ಕೇಂದ್ರದ ಡಾಟಾ ಬ್ಯಾಂಕ್‌ನೊಂದಿಗೆ ಸಂಪರ್ಕಿಸಲಾಗಿದೆ.
ನೈಜೀರಿಯಾ ಮೂಲದ ಯುವತಿಯ ಪ್ರಕರಣಕ್ಕೆ ಸಂಬಂಧಿಧಿಸಿದಂತೆ ತನಿಖೆ ನಡೆಯುತ್ತಿದ್ದು, ವರದಿಯನ್ನು ತಲುಪಿಸಲಾಗುವುದು ಎಂದರು.
-ಉದಯವಾಣಿ
Comments are closed.