ರಾಷ್ಟ್ರೀಯ

ಸ್ಟೋನ್ ಕಿಲ್ಲರ್: ಹತ್ಯೆ ಮಾಡುವ ಮುನ್ನ ಯುವತಿಯರೊಂದಿಗೆ ಸೆಕ್ಸ್‌ ಮಾಡುತ್ತಿದ್ದ ಆರೋಪಿ ಬಂಧನ

Pinterest LinkedIn Tumblr

stoneರಾಜ್‌ಕೋಟ್: ಕಳೆದ ಏಪ್ರಿಲ್ ತಿಂಗಳಿನಿಂದ ಸರಣಿ ಹತ್ಯೆಯಲ್ಲಿ ತೊಡಗಿರುವ ಆರೋಪಿ, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡುವ ಮುನ್ನ ಬಲಿಪಶುವಾದವರೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಲ್ಲಿನಿಂದ ಜನರನ್ನು ಹತ್ಯೆ ಮಾಡುವ ಮೂಲಕ ಖ್ಯಾತಿ ಪಡೆದ ಆರೋಪಿ ರಮಾವತ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ಸಾಗರ್ ಮೆವಡಾ, ಪ್ರವೀನ್ ಬರಾದ್ ಮತ್ತು ವಲ್ಲಭ್ ರಂಗಾನಿ ಎನ್ನುವ ಮೂವರು ಮಹಿಳೆಯರನ್ನು ಆರೋಪಿ ಹತ್ಯೆ ಮಾಡಿದ್ದನು.

ಹತ್ಯೆಯಾದವರ ಮೈಮೇಲೆ ವೀರ್ಯಾಣುಗಳು ಕಂಡುಬಂದಿದ್ದರಿಂದ ಆರೋಪಿ ಹತ್ಯೆ ಮಾಡುವ ಮುನ್ನ ಯುವತಿಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಎನ್ನುವುದು ಪತ್ತೆಯಾಗಿತ್ತು ಎಂದು ಪೊಲೀಸ್ ಆಯುಕ್ತ ಅನುಪಮ್ ಸಿನ್ಹಾ ಗೆಹ್ಲೋಟ್ ತಿಳಿಸಿದ್ದಾರೆ.

ಯುವತಿಯರನ್ನು ದರೋಡೆ ಮಾಡಲು ಅವರನ್ನು ಹತ್ಯೆ ಮಾಡುತ್ತಿದ್ದ. ಮುಂಬರುವ ದಿನಗಳಲ್ಲಿ ಮತ್ತಷ್ಟು ಯುವತಿಯರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.