ಕೊಪ್ಪಳ ,ಜೂ.24: ಹುಡುಗ-ಹುಡುಗಿಯನ್ನ ಪ್ರೀತಿಸಿ ಮದುವೆಯಾಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಯುವಕ ಮಂಗಳಮುಖಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ.
ಕೊಪ್ಪಳದ ರೈಲ್ವೇ ಕ್ಯಾಂಟಿನ್ನಲ್ಲಿ ಕೆಲಸ ಮಾಡುತ್ತಿದ್ದ ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದ ಶಿವು ಎನ್ನುವ ಈ ಯುವಕ, ರಾಧಿಕಾ ಎನ್ನುವ ತೃತೀಯ ಲಿಂಗಿಯನ್ನ ಪ್ರೀತಿಸಿ ಮದುವೆ ಆಗಿದ್ದಾನೆ. ಆದರೆ, ಈ ವಿಷಯ ಶಿವು ಕುಟುಂಬದವರಿಗೆ ಮರ್ಮಾಘಾತವನ್ನುಂಟುಮಾಡಿದೆ.
ವಿಷಯ ತಿಳಿದು ಓಡಿಬಂದ ಶಿವು ತಾಯಿ ಮತ್ತು ಮನೆಯವರು ಥಳಿಸಿ, ಇಬ್ಬರನ್ನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.. ಆದರೆ, ಶಿವು ಮಾತ್ರ ರಾಧಿಕಾಳನ್ನ ಬಿಟ್ಟುಬರಲು ಸುತಾರಾಂ ಸಿದ್ಧವಿಲ್ಲ. ಮೊದಲೇ ಅನಾಥೆಯಾಗಿದ್ದವಳಿಗೆ ಬಾಳು ಕೊಡುವುದಾಗಿ ಮದುವೆಯಾಗಿದ್ದ ಶಿವುನನ್ನ ಬಿಟ್ಟುಕೊಡಲು ರಾಧಿಕಾಗೂ ಇಷ್ಟವಿಲ್ಲ.
ಇನ್ನೂ, ಶಿವುಗೆ ಮನೆಯವರ ಒಪ್ಪಿಗೆ ಪಡೆಯುವಂತೆ ತೃತೀಯ ಲಿಂಗಿ ಸಮುದಾಯದವರು ಮೊದಲೇ ಹೇಳಿದ್ದರಂತೆ. ಆದರೆ, ಶಿವು ಅವರದ್ದೇನು ಸಮಸ್ಯೆಯಿಲ್ಲ ಅಂದಿದ್ದ ಎನ್ನೋದು ರಾಧಿಕಾ ಸ್ನೇಹಿತರ ಆರೋಪ.
ಒಂದೆಡೆ ಬೇರಾಗಲು ಇಷ್ಟವಿಲ್ಲ. ಇನ್ನೊಂದೆಡೆ ಮನೆಯವರ ಒತ್ತಡಕ್ಕೆ ಸಿಲುಕಿರುವ ಶಿವು, ತೃತೀಯ ಲಿಂಗಿ ಪತ್ನಿ ಜೊತೆ ಸಂಸಾರ ನಡೆಸುತ್ತಾನಾ ಎಂಬುದನ್ನ ಕಾದುನೋಡಬೇಕು.

Comments are closed.