ಮುಂಬೈ

ಇದೇನಿದು ಪ್ರಿಯಾಂಕ ಚೋಪ್ರಾ ನಯವಾದ ಕಂಕುಳ ಕುರಿತಾದ ಚರ್ಚೆ ?

Pinterest LinkedIn Tumblr

priಮುಂಬಯಿ : ನಟಿ ಮಣಿಯರು ತೊಟ್ಟ ಬಟ್ಟೆ ,ಉಟ್ಟ ಸೀರೆ ಗಳ ಕುರಿತಾಗಿ ,ಇಲ್ಲವೋ ಮೇಕಪ್‌ ವಿಚಾರದಲ್ಲೋ ,ಇಲ್ಲ ಅವರ ಅಭಿನಯದ ಕುರಿತಾಗಿ ಜನರು ವಿಚಾರ ಮಾಡುವುದು ಸಾಮಾನ್ಯ .ಆದರೆ ವಿಶ್ವದ ಜನಪ್ರಿಯ ನಟಿ ಪ್ರಿಯಾಂಕ ಚೋಪ್ರಾ ಅವರ ನಯವಾದ ಕಂಕುಳ ವಿಚಾರದಲ್ಲಿ ಜನರು ಇದೀಗ ತಲೆ ಕೆಡೆಸಿಕೊಂಡಿದ್ದಾರೆ.

ಹೌದು ಈ ಚರ್ಚೆಗೆ ಕಾರಣವಾಗಿರುವುದು ಜನಪ್ರಿಯ ಪುರುಷರ ಮ್ಯಾಗಜೀನ್‌ ಆದ ಮ್ಯಾಕ್ಸಿಮ್‌ ನ ಜೂನ್‌ -ಜುಲೈ ಸಂಚಿಕೆಯ ಮುಖಪುಟದಲ್ಲಿ ವಿಶ್ವದ ಸೆಕ್ಸಿ ಮಹಿಳೆ ಎಂಬ ಅಡಿಬರಹದಲ್ಲಿ ಪ್ರಕಟವಾದ 33 ರ ಹರೆಯದ ಪ್ರಿಯಾಂಕ ಚೋಪ್ರಾ ಅವರ ಫೋಟೋ.

ಇತರ ಯುವತಿಯರು ಅಸೂಹೆ ಪಡುವಂತಹ ನಯವಾದ ಕಂಕುಳುಗಳನ್ನು ತೋರಿಸಿ ಪ್ರಿಯಾಂಕ ಚೋಪ್ರಾ ಚರ್ಚೆಯ ಕೇಂದ್ರ ಬಿಂದುವಾಗಿದ್ದರು. ಕೆಲವರು ಇದು ಫೋಟೋ ಶಾಪ್‌ ಮಾಡಿದ ಚಿತ್ರ ಎಂದರೆ ಇನ್ನು ಕೆಲವರು ಪ್ರಿಯಾಂಕಾ ಆರ್ಮ್ ಪಿಟ್‌ಗಳ ರಹಸ್ಯದ ಕುರಿತಾಗಿ ಜಗತ್ತು ತಿಳಿಯಲಿ ಎಂದೂ ,ಇನ್ನು ಕೆಲವರು ಪ್ರಿಯಾಂಕ ಕಂಕುಳು ಈಗ ತಾನೆ ಹುಟ್ಟಿದ ಮಗುವಿನ ಚರ್ಮದಷ್ಟು ನಯವಾದಂತಿದೆ ಎಂದು ಟ್ವೀಟ್‌ ಮಾಡಿದ್ದರು.

ಹೀಗೆ ಅನಗತ್ಯ ವಿಚಾರದಲ್ಲಿ ದೊಡ್ಡ ಚರ್ಚೆ ಮುಂದುವರಿದ ವೇಳೆ ಮಂಗಳವಾರ ಮಧ್ಯ ಪ್ರವೇಶಿಸಿದ ಪ್ರಿಯಾಂಕಾ ಚೋಪ್ರಾ ಟ್ವೀಟರ್‌ ನಲ್ಲಿ ಇನ್ನೊಂದು ಚಿತ್ರವನ್ನು ಪ್ರಕಟಿಸಿಕೊಂಡು ಇದನ್ನೂ ಚರ್ಚೆಗೆ ಸೇರಿಸಿಕೊಳ್ಳಿ ಎಂದು ಬರೆದಿದ್ದಾರೆ.
-ಉದಯವಾಣಿ

Comments are closed.