ಬೆಂಗಳೂರು: ಬಹುತೇಕ ಸ್ವಾಮೀಜಿಗಳು ಬಂಡವಾಳಶಾಹಿಗಳಾಗಿದ್ದು, ಕಪ್ಪು ಹಣದ ಪೋಷಣೆಯಲ್ಲಿ ನಿರತರಾಗಿದ್ದಾರೆ ಎಂದು ನಿಡುಮಾಮಿಡಿ ಮಹಾಸಂಸ್ಥಾನದ ಮಠಾಧೀಶ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕಿಡಿಕಾರಿದ್ದಾರೆ.
ನಗರದ ಬಸವನಗುಡಿಯಲ್ಲಿರುವ ನಿಡುಮಾಮಿಡಿ ಮಠದ ಸಭಾಂಗಣದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಆಯೋಜಿಸಿರುವ ಮೂರು ದಿನಗಳ “ಅಂತರ್ ನಿರೀಕ್ಷಣೆಯ ಹಾದಿಯಲ್ಲಿ ಮಠಾಧೀಶರು’ ಕುರಿತ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಹಲವು ಸ್ವಾಮೀಜಿಗಳು ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದೆ, ಪಾಳೇಗಾರಿಕೆ ಪದ್ಧತಿ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ವೋಟ್‌ಬ್ಯಾಂಕ್ ರಾಜಕಾರಣ ನಡೆಸುತ್ತಿದ್ದು, ದೊಡ್ಡ ಕಾರು, ಹೆಲಿಕಾಪ್ಟರ್‌ಗಳ ಮೂಲಕ ಹಾರಾಟ ನಡೆಸಿ ಪ್ರಧಾನಿ, ಮುಖ್ಯಮಂತ್ರಿಗಳನ್ನು
ಕಾರ್ಯಕ್ರಮಗಳಿಗೆ ಕರೆಯಿಸಿಕೊಂಡು ಮೆರೆಯುತ್ತಿ¨ªಾರೆ. ನ್ಯಾಯಾಲಯವನ್ನೇ ಧಿಕ್ಕರಿಸಿ ಬುಗುರಿಯಂತೆ ಆಡಿಸುವಂತಹ ಸ್ವಾಮೀಜಿಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಇದು ದೇಶದ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಶಕಗಳ ಹಿಂದೆ ಧ್ಯಾನಿಗಳು, ದಾನಿಗಳು, ತಪಸ್ವಿಗಳು ಮತ್ತು ಹೃದಯ ಶ್ರೀಮಂತಿಕೆ ಹೊಂದಿದ್ದ ಸ್ವಾಮೀಜಿಗಳಿಗೆ ಗೌರವ ಸಿಗುತ್ತಿತ್ತು. ಆದರೆ, ಈಗ ಕೀರ್ತಿ, ಗಳಿಕೆ, ಆರ್ಥಿಕ ಶ್ರೀಮಂತಿಕೆಯ ಅಗತ್ಯ ಇದೆ. ಹೀಗಾಗಿ ರಾಜಕೀಯವನ್ನು ನಿಯಂತ್ರಿಸುವುದರ ಜತೆಗೆ ಮಠದ ಆಸ್ತಿಯನ್ನು ಹೆಚ್ಚಿಸಿಕೊಳ್ಳಲಾಗುತ್ತಿದೆ. ಕಪ್ಪು ಹಣವನ್ನು ಪೋಷಿಸುವ ಮಠಗಳು ಬಂಡವಾಳಶಾಹಿಗಳಾಗಿವೆ. ಇಂತಹ ಮಠದ ಸ್ವಾಮೀಜಿಗಳು ಸಮಾಜಕ್ಕೆ ಕಂಟಕವಾಗಿ ಪರಿಣ ಮಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ,
ಸಮಾಜವನ್ನು ಮುನ್ನಡೆಸಬೇಕಾದ ವ್ಯಕ್ತಿ ಪರಿಶುದ್ಧವಾದರೆ ಮಾತ್ರ ಮಾರ್ಗದರ್ಶನಕ್ಕೆ ಅರ್ಹನಾಗಿರುತ್ತಾನೆ. ಸ್ವಾಮೀಜಿ ಎಂಬ ಲಾಂಛನ ಧರಿಸಿದ ಮಾತ್ರಕ್ಕೆ ಎಲ್ಲರೂ ದೊಡ್ಡರಾಗುವುದಿಲ್ಲ. ನಮ್ಮಲ್ಲಿ ಮಠಾಧಿಪತಿಗಳಾಗುವ ಆದರ್ಶಗಳು ಇಲ್ಲವಾದಲ್ಲಿ ಸಮಾಜ ನಮ್ಮನ್ನು
ವಿಮರ್ಶೆಗೊಳಪಡಿಸುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದಾಗ ಮಾತ್ರ ಮಾರ್ಗದರ್ಶನ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಲ್ಕಿ ಹಿರೇಮಠ ಸಂಸ್ಥಾನ ಮಠಾಧ್ಯಕ್ಷರಾದ ಡಾ. ಬಸವಲಿಂಗ ಪಟ್ಟಾಧ್ಯಕ್ಷ ಸ್ವಾಮೀಜಿ, ಗದಗ ತೋಂಟದಾರ್ಯ ಮಹಾಸಂಸ್ಥಾನ ಮಠದ ತೋಂಟದಾರ್ಯ ಸ್ವಾಮೀಜಿ, ಸಾಹಿತಿಗಳಾದ ಡಾ.ಕೆ. ಮರುಳಸಿದ್ದಪ್ಪ, ರಂಜಾನ್ ದರ್ಗಾ ಇತರರು ಉಪಸ್ಥಿತರಿದ್ದರು.
ಜಾತಿಗಣತಿ: ಸಮುದಾಯ ಒಡೆಯುವ ಕೆಲಸ ಮೀಸಲಾತಿ ಹೆಸರಲ್ಲಿ ಸರ್ಕಾರ ಕೈಗೊಂಡಿ ರುವ ಜಾತಿ ಗಣತಿ ಮೂಲಕ ಸಮುದಾಯ ಗಳನ್ನು ಒಡೆಯುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ್ಮೆಯಿಂದ ಮಾಡುತ್ತಿ ದ್ದಾರೆ ಎಂದು ಗದಗ ತೋಂಟದಾರ್ಯ ಮಹಾಸಂಸ್ಥಾನ ಮಠದ ತೋಂಟದಾರ್ಯ ಸ್ವಾಮೀಜಿ ಆರೋಪಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿಗಳು ಜಾತಿ ಬಳಕೆ ಮಾಡಿಕೊಳ್ಳುವ ಕೆಲಸಕ್ಕೆ
ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಾತಿಗಣತಿ ಮಾಡಲಾಗುತ್ತಿದೆ. ಆಧುನಿಕ ಜಗತ್ತಿನಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ರಾಜ್ಯ ಸರ್ಕಾರಗಳು ಇಂತಹ ಜೀವನಮಟ್ಟ ಸುಧಾರಿಸುವಂತಹ ವಿಚಾರಗಳನ್ನು ಸೂಕ್ಷವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.
-ಉದಯವಾಣಿ
Comments are closed.