
ಪಟನಾ (ಪಿಟಿಐ): ಬಿಹಾರದಲ್ಲಿ ಮಾರಕ ಸಿಡಿಲು ಮತ್ತು ಭಾರೀ ಮಳೆಗೆ 57 ಜನರು ಬಲಿಯಾಗಿದ್ದು, 24 ಮಂದಿಗೆ ಗಾಯಗಳಾಗಿವೆ.
ಸೋಮವಾರದಿಂದ ಇಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪಟನಾ ಜಿಲ್ಲೆಯಲ್ಲಿ 6 ಮಂದಿ ಮತ್ತು ಬುಕ್ಸಾರ್ ಜಿಲ್ಲೆಯಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.
ಅದೇ ವೇಳೆ ಭಾಗಲ್‍ಪುರ್, ಮುಂಗೇರ್, ಸಮಸ್ಟಿಪುರ್ ಜಿಲ್ಲೆಗಳಲ್ಲಿ ಇಬ್ಬರು, ಬಂಕಾ, ಮಾಧೇಪುರ, ಮುಜಾಫರ್ ಪುರ್ ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಗಳಲ್ಲಿಯೂ ಸಾವು ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿ ವ್ಯಾಸ್‍ಜಿ ಹೇಳಿದ್ದಾರೆ.
Comments are closed.