ನವದೆಹಲಿ (ಪಿಟಿಐ): ಪನಾಮಾ ಸೋರಿಕೆಗೆ ಸಂಬಂಧಿಸಿದಂತೆ ವಿವಿಧ ತನಿಖಾ ಏಜೆನ್ಸಿಗಳು ಸರ್ಕಾರಕ್ಕೆ 3 ವರದಿಗಳನ್ನು ಸಲ್ಲಿಸಿವೆ.
ವಿದೇಶಿ ಕಂಪೆನಿಗಳಲ್ಲಿ ಕಪ್ಪು ಹಣ ಹೂಡಿಕೆ ಮಾಡಿರುವ ಬಗ್ಗೆ ಪನಾಮಾ ಪೇಪರ್ಸ್ ಬಹಿರಂಗಪಡಿಸಿತ್ತು. ಈ ಸಂಬಂಧ ವಿವಿಧ ತನಿಖಾ ಏಜೆನ್ಸಿಗಳು (ಎಂಎಜಿ) ವರದಿಗಳನ್ನು ಸಲ್ಲಿಸಿವೆ. ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಮಾಹಿತಿ ಒದಗಿಸುತ್ತಿದೆ ಎಂದು ಕಂದಾಯ ಇಲಾಖೆ ಹೇಳಿದೆ.
ತೆರಿಗೆದಾರರ ಸ್ವರ್ಗ ಎಂದೇ ಜನಪ್ರಿಯವಾಗಿರುವ ಪನಾಮಾದಲ್ಲಿ ಭಾರತೀಯರು ಕಪ್ಪು ಹಣ ಇರಿಸಿರುವುದರ ಕುರಿತ ತನಿಖೆಗೆ ಸರ್ಕಾರ ಏಪ್ರಿಲ್ನಲ್ಲಿ ತನಿಖಾ ತಂಡಗಳನ್ನು ರಚಿಸಿತ್ತು.
ರಾಷ್ಟ್ರೀಯ
Comments are closed.