
ಮಂಗಳೂರು,ಜೂನ್.21 : ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಬಾರೀ ಮಾಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನೆಡೆ ಉತ್ತಮ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ.
ಮಂಗಳೂರು ನಗರದಲ್ಲಿ ಬಾನುವಾರ ಸಂಜೆಯಿಂದ ಬಿರುಸಿನ ಮಳೆ ಆರಂಭಗೊಂಡಿದ್ದು, ಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಕೆಲವೆಡೆ ಚರಂಡಿ ಸಮಸ್ಯೆಯಿಂದ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಮಳೆಯ ಅಬ್ಬರಕ್ಕೆ ಕೆಲವೆಡೆ ಸಣ್ಣಪುಟ್ಟ ಮಳೆಹಾನಿ ಸಂಭವಿಸಿರುವುದನ್ನು ಬಿಟ್ಟರೆ ಉಳಿದಂತೆ ಎಲ್ಲಿ ಕೂಡ ಮಳೆಯಿಂದ ಹೆಚ್ಚಿನ ಅನಾಹುತ ನಡೆದ ಬಗ್ಗೆ ವರದಿಯಾಗಿಲ್ಲ.

ಪುತ್ತೂರು, ಸುಬ್ರಹ್ಮಣ್ಯದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಸುಳ್ಯ ಮದ್ದಡ್ಕ, ವಿಟ್ಲ, ಪುಂಜಾಲಕಟ್ಟೆ, ಬಂಟ್ವಾಳ, ಉಳ್ಳಾಲ, ಗುತ್ತಿಗಾರು, ಮೂಲ್ಕಿ, ಮೂಡಬಿದಿರೆ, ಪರಿಸರದಲ್ಲಿಯೂ ಉತ್ತಮ ಮಳೆ ಸುರಿದಿದೆ.
ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಉಜಿರೆ, ನಿಡಿಗಲ್, ಮೊದಲಾದೆಡೆ ಚರಂಡಿ ಅವ್ಯವಸ್ಥೆಯಿಂದಾಗಿ ಸೇತುವೆ, ರಸ್ತೆ ಮೇಲೆ ನೀರು ನಿಂತು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಲ್ಪಸ್ವಲ್ಪ ಅಡ್ಡಿಯಾದ ಬಗ್ಗೆ ವರದಿಯಾಗಿದೆ.
Comments are closed.