ಮಳೆಗಾಲವಾದ್ದರಿಂದ ಸೊಳ್ಳೆಗಳ ಸಂತಾನ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹೆಚ್ಚು ಹರಡುತ್ತಿವೆ. ಡೆಂಘೀ, ಚಿಕೂನ್’ಗುನ್ಯಾ, ಮಲೇರಿಯಾ ರೋಗದ ಲಕ್ಷಣಗಳು ಹೆಚ್ಚೆಚ್ಚು ಕಂಡು ಬರುತ್ತಿವೆ. ಪ್ರತಿ ದಿನ ಆಸ್ಪತ್ರೆಗೆ ಬರುವ ಹೊರರೋಗಿಗಳ ಸಂಖ್ಯೆಯಲ್ಲಿ ಶೇ.60ರಷ್ಟು ಮಂದಿ ಜ್ವರದಿಂದ ಬಳಲುತ್ತಿದ್ದಾರೆ.
ಮುನ್ನೆಚ್ಚರಿಕೆ ಹೇಗೆ?
ಡೆಂಘೀ ರೋಗ ಈಡಿಸ್ ಈಜಿಪ್ಟಿ ಸೊಳ್ಳೆಗಳಿಂದ ಹರಡುತ್ತದೆ. ಇವು ಶುದ್ಧ ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ನೀರಿನ ತೊಟ್ಟಿ, ತೆಂಗಿನ ಚಿಪ್ಪು, ಟೈರ್ಗಳಲ್ಲಿ ನಿಲ್ಲುವ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದ್ದರಿಂದ ನೀರನ್ನು ಎರಡು ದಿನಗಳಿಗೊಮ್ಮೆ ಬದಲಾಯಿಸಬೇಕು. ಸಾರ್ವಜನಿಕರು ಮನೆ ಮುಂದೆ ತೆಂಗಿನ ಚಿಪ್ಪು, ಪ್ಲಾಸ್ಟಿಕ್ ವಸ್ತುಗಳು, ಟೈರ್ಗಳು, ಸಿಮೆಂಟ್ ತೊಟ್ಟಿಗಳು, ಏರ್ ಕೂಲರ್ಗಳು, ಹೂವಿನ ಕುಂಡಗಳ ಕೆಳಗಿನ ತಟ್ಟೆಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ಮೊದಲಾದ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಡೆಂಘೀ ಲಕ್ಷಣಗಳು:
ಡೆಂಘೀ ಜ್ವರಕ್ಕೆ ಒಳಗಾದವರಲ್ಲಿ ತಲೆನೋವು, ವಿಪರೀತ ಜ್ವರ, ಚರ್ಮದ ತುರಿಕೆ, ಮೈಕೈ ನೋವು, ವಾಕರಿಕೆ, ವಾಂತಿ ಲಕ್ಷಣಗಳು ಗೋಚರಿಸುತ್ತವೆ. ಆರೋಗ್ಯವಂತ ವ್ಯಕ್ತಿಯಲ್ಲಿ ಪ್ರತಿ ಎಂಎಲ್ ರಕ್ತದಲ್ಲಿ 1.50 ಲಕ್ಷದಿಂದ 4.50ಲಕ್ಷದವರೆಗೆ ಬಿಳಿ ರಕ್ತದ ಕಣಗಳಿರುತ್ತವೆ. ಆದರೆ, ಡೆಂಘೀ ಪೀಡಿತರದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಲಕ್ಷಕ್ಕಿಂತ ಕಡಿಮೆ ಇರುತ್ತದೆ.

Comments are closed.