ಮನೋರಂಜನೆ

ಅಪ್ಪಂದಿರ ದಿನ ತಂದೆಯ ಫೋಟೋವನ್ನು ಶೇರ್ ಮಾಡಿ, ಭಾವನಾತ್ಮಕ ಸಂದೇಶವನ್ನು ಬರೆದುಕೊಂಡ ವಿರಾಟ್ ಕೊಹ್ಲಿ

Pinterest LinkedIn Tumblr

kohli

ಅಪ್ಪಂದಿರ ದಿನಾಚರಣೆ ಹಿನ್ನೆಲೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮ್ಮ ತಂದೆಯ ಫೋಟೋವನ್ನು ಶೇರ್ ಮಾಡಿ. ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ.

2006ರ ಡಿಸೆಂಬರ್ 19ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಂದೆ ವಿಧಿವಶರಾಗಿದ್ದಾರೆ ಎಂಬ ಆಘಾತಕಾರಿ ಸುದ್ಧಿ ಬೆಳಗ್ಗೆ ನನಗೆ ಮುಟ್ಟಿತು. ಆ ವೇಳೆ ನಾನು ದೆಹಲಿ ಪರ ಆಡುತ್ತಿದ್ದೆ. ತನ್ನ ತಂದೆಯ ಸಾವಿನ ಸುದ್ದಿ ತಿಳಿದರು ಕರ್ನಾಟಕ ವಿರುದ್ಧ ತಂಡ ಫಾಲೋ ಆನ್ ಭೀತಿಗೆ ಸಿಲುಕಿದ್ದರಿಂದ ತಂಡದ ಪರವಾಗಿ ಅಮೂಲ್ಯ 90 ರನ್ ಸಿಡಿಸಿ ತಂಡವನ್ನು ಫಾಲೋ ಆನ್ ಭೀತಿಯಿಂದ ರಕ್ಷಿಸಿದೆ. ಇದು ನಿಜವಾಗಿ ನನ್ನ ತಂದೆ ನನಗೆ ಕೊಟ್ಟ ಧೈರ್ಯದಿಂದಾಗಿ ಸಾಧ್ಯವಾಯಿತು ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

ಭಾನುವಾರವಾದ ಇಂದು ಅಪ್ಪಂದಿರ ದಿನಾಚರಣೆ ದಿನದ ಶುಭಾಶಯವನ್ನು ನನ್ನ ತಂದೆಗೆ ನಾನು ಯಾವ ರೀತಿ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ನನ್ನ ತಂದೆಯ ಸಾವು ನಿಜವಾಗಿ ನನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಬಲ ನೀಡಿದೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

Comments are closed.