
ದುಬೈ: ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ನೇತೃತ್ವದಲ್ಲಿ ದುಬೈಯ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಯೋಗ ಶಿಬಿರದಲ್ಲಿ 20,000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ದುಬೈ ಭಾರತೀಯ ದೂತಾವಾಸ ಹಾಗು ದುಬೈ ಸ್ಪೋರ್ಟ್ಸ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಯೋಗ ಶಿಬಿರದಲ್ಲಿ ಭಾರತೀಯರೊಂದಿಗೆ ಯುಏಇ ಯಲ್ಲಿ ನೆಲೆಸಿರುವ ವಿವಿಧ ದೇಶಗಳ ಜನ ಭಾಗವಹಿಸಿದ್ದರು.

ಎರಡು ಪ್ರತ್ಯೇಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಯೋಗದ ಮೂಲಕ ಆರೋಗ್ಯವನ್ನು ಹೇಗೆ ಕಾಪಾಡಬಹುದು. ಜೊತೆಗೆ ಯಾವ ಯಾವ ಯೋಗದಿಂದ ಏನು ಉಪಯೋಗ ಆಗುತ್ತದೆ ಎಂಬುದನ್ನು ಬಾಬಾ ರಾಮ್ ದೇವ್ ಮಾಡಿ ತೋರಿಸಿದರು.
ಭಾರತದ ಕಾನ್ಸುಲ್ ಜನರಲ್ ಅನುರಾಗ್ ಭೂಶನ್, ದುಬೈ ಮೂಲದ ಯೋಗ ಶಿಕ್ಷಕ ಭಾರತ್ ಠಾಕೂರ್ ಸೇರಿದಂತೆ ಹಲವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
Comments are closed.