ಕರ್ನಾಟಕ

‘The Conjuring 2’ ಕ್ಲೈಮ್ಯಾಕ್ಸ್ ನಿಂದ ಪ್ರಾಣ ಬಿಟ್ಟ ವ್ಯಕ್ತಿ

Pinterest LinkedIn Tumblr

the_conjuring_two

ಚನ್ನೈ ಜೂ.18 : 65 ವರ್ಷದ ವ್ಯಕ್ತಿಯೋರ್ವ ಚಿತ್ರ ಮಂದಿರದಲ್ಲಿ ಹಾರರ್ ಸಿನಿಮಾ ಕ್ಲೈಮ್ಯಾಕ್ಸ್ ವೀಕ್ಷಿಸುತ್ತಿದ್ದ ಸಂದರ್ಭದಲ್ಲೇ ಸಾವನ್ನಪ್ಪಿದ್ದಾನೆ.
ತಮಿಳುನಾಡಿನ ತಿರುವಣ್ಣಾಮಲೈ ನಗರದಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ. ಪೊಲೀಸರ ಹೇಳಿಕೆ ಪ್ರಕಾರ, ಆಂಧ್ರಪ್ರದೇಶ ನಿವಾಸಿಗಳಾದ ಇಬ್ಬರು ಇತ್ತೀಚೆಗಷ್ಟೇ ತೆರೆಕಂಡಿದ್ದ ಹಾಲಿವುಡ್ ಹಾರರ್ ಸಿನಿಮಾ The Conjuring 2 ಶೋ ವೀಕ್ಷಿಸಲು ರಾತ್ರಿ ನಗರದ ಬಾಲಸುಬ್ರಮಣ್ಯಯರ್ ಥಿಯೇಟರ್ ಗೆ ತೆರಳಿದ್ದರು.

ಈ ವೇಳೆ ಕ್ಲೈಮ್ಯಾಕ್ಸ್ ಸಂದರ್ಭದಲ್ಲಿಯೇ ಅದರಲ್ಲೊಬ್ಬ ವ್ಯಕ್ತಿ ಎದೆನೋವಿನಿಂದ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವ್ಯಕ್ತಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Comments are closed.