
ಮಂಗಳೂರು / ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೆಪುರ ಬ್ರೇಕ್ ವಾಟರ್ ಮಧ್ಯಭಾಗದ ಬಂಡೆಕಲ್ಲು ಮಧ್ಯದಲ್ಲಿ ಸುಮಾರು 40ವರ್ಷ ಆಸುಪಾಸಿನ ಪುರುಷನ ಮೃತದೇಹ ಪತ್ತೆಯಾಗಿದೆ.ಉಳ್ಳಾಲ ಸಮುದ್ರ ತಟದಲ್ಲಿ ಕೋಟೆಪುರ ಬ್ರೇಕ್ ವಾಟರ್ ಮಧ್ಯಭಾಗದ ಬಂಡೆಕಲ್ಲು ಮಧ್ಯದಲ್ಲಿ ಸಿಕ್ಕಿದ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನದಿಯಲ್ಲಿ ನಾಡದೋಣಿಯಲ್ಲಿ ಸಾಗುತ್ತಿರುವಾಗ ಆಯತಪ್ಪಿ ಬಿದ್ದಿರಬಹುದು ಎಂದು ಸಂಶಯಿಸಲಾಗಿದೆ.
ಜೆಪ್ಪಿನಮೊಗರು ಅಳಿವೆಬಾಗಿಲು ನೇತ್ರಾವತಿ ಸೇತುವೆ ಸಮೀಪ 40ವರ್ಷ ಆಸುಪಾಸಿನ ಪುರುಷನ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಲಭಿಸಿಲ್ಲ. ಮೃತದೇಹದ ಪಕ್ಕದಲ್ಲಿ ಮೊಬೈಲ್ ಪತ್ತೆಯಾಗಿದೆ.
ತಲಪಾಡಿ ಕೆ.ಸಿ. ರೋಡ್ ಸಮೀಪದ ಫ್ಲೈವುಡ್ ಅಂಗಡಿ ಸಮೀಪ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ.ಇದು ಸ್ಥಳೀಯ ಫ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ವ್ಯಕ್ತಿಯ ಶವ ಎಂದು ಗುರುತಿಸಲಾಗಿದ್ದು ಹೃದಾಯಾಘಾತದಿಂದ ಸತ್ತಿರಬಹುದು ಎಂದು ಸಂಶಯಿಸಲಾಗಿದೆ.
Comments are closed.