ಕರಾವಳಿ

ಕುಂದಾಪುರ ತಹಸೀಲ್ದಾರರಿಗೆ ಮಾಹಿತಿ ಹಕ್ಕು ಆಯೋಗದಿಂದ 10 ಸಾವಿರ ರೂ.ದಂಡ

Pinterest LinkedIn Tumblr

stamp penalty in red over white background

ಕುಂದಾಪುರ: ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಅವರಿಗೆ ಕರ್ನಾಟಕ ಮಾಹಿತಿ ಹಕ್ಕು ಆಯೋಗ 10 ಸಾವಿರ ದಂಡಿ ವಿಧಿಸಿದೆ.

2016ಮೇ ಮತ್ತು 2016 ಜೂನ್ ತಿಂಗಳ ಸಂಬಳ ಪಾವತಿಸುವ ಸಂದರ್ಭದಲ್ಲಿ ಪ್ರತಿ ತಿಂಗಳು 5 ಸಾವಿರದಂತೆ ಒಟ್ಟು ಹತ್ತು ಸಾವಿರ ಕಡಿತ ಮಾಡಿ ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿ, ರಶೀದಿಯೊಂದಿಗೆ ವರದಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರಿಗೆ ಅಯೋಗ ನಿರ್ದೇಶಿಸಿದೆ.

ಕುಂದಾಪುರ ನಿವಾಸಿ ಮಹಿಳೆಯೊಬ್ಬರು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದು, ಅದಕ್ಕೆ ಮಾಹಿತಿ ಹಕ್ಕು ಅಧಿಕಾರಿ ಮಾಹಿತಿ ನೀಡದಿದ್ದ ಕಾರಣ ಅವರು ಕರ್ನಾಟಕ ಮಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.
2015 ಫ.11 ರಂದು ವಿಚಾರಣೆಗೆ ಹಾಜರಾಗುವಂತೆ ಕುಂದಾಪುರ ತಹಸೀಲ್ದಾರ್ ಅವರಿಗೆ ಅಯೋಗ ಸೂಚಿದ್ದರೂ, ಗೈರಾಗಿದ್ದು, ಮತ್ತೊಮ್ಮೆ ಕೇಳಿದ ಮಾಹಿತಿ ಅಂಚೆ ಮೂಲಕ ರವಾನಿಸಿ ವರದಿ ನೀಡುವಂತೆ ಆಯೋಗ ಸೂಚಿಸಿತ್ತು.

ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ ಏಕೆ ದಂಡ ವಿಧಿಸಬಾರದು ಎಂದು ಲಿಖಿತವಾಗಿ ಕೇಳಿದ್ದು, ಲಿಖಿತ ಸಮಜಾಯಸಿ ಮುಂದಿನ ವಿಚಾರಣೆ ವೇಳೆ ನೀಡುವಂತೆ ಅಯೋಗ ಕೇಳಿತ್ತು. ಯಾವುದಕ್ಕೂ ಉತ್ತರಸಿದ ಕಾರಣ ಮಾಹಿತಿ ಹಕ್ಕು ಆಯೋಗ ದಂಡ ವಿಧಿಸಿದೆ.

Comments are closed.