ಕರಾವಳಿ

ಸ್ಫೀಡ್‌‌ಕಾರ್ಟ್ ಡಾಟ್ ಕಾಮ್ ಆನ್‌ಲೈನ್ ಶಾಪಿಂಗ್ ಸಂಸ್ಥೆಯ ಮೊಬೈಲ್ ಆಯಪ್‌ಗೆ ಚಾಲನೆ.

Pinterest LinkedIn Tumblr

Bayar_kadar_meet_1

ಮಂಗಳೂರು, ಜೂ.17: ಗ್ರಾಹಕರಿಗೆ ಶಾಪಿಂಗ್ ಸುಲಭವಾಗುವ ನಿಟ್ಟಿನಲ್ಲಿ ಶಾಪಿಂಗ್ ಪ್ರಕ್ರಿಯೆಯನ್ನು ಸರಳೀಕರಿಸಿ ತಯಾರಿಸಲಾದ ಬಾಯಾರ್ ಸ್ಫೀಡ್‌‌ಕಾರ್ಟ್ ಡಾಟ್ ಕಾಮ್ ಎಂಬ ಅಧುನಿಕ ವಿನ್ಯಾಸದ ಆನ್‌ಲೈನ್ ಶಾಪಿಂಗ್ ಸಂಸ್ಥೆಯ ಮೊಬೈಲ್ ಆಯಪ್‍ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ರವರು ಚಾಲನೆ ನೀಡಿ ಉದ್ಘಾಟಿಸಿದರು.

ಆಧುನಿಕತೆ ಮತ್ತು ತಂತ್ರಜ್ಞಾನಗಳು ಬೆಳವಣಿಗೆ ಕಾಣುತ್ತಿದ್ದು ಇದನ್ನು ಬಳಸಿಕೊಂಡು ಆರಂಭಗೊಂಡಿರುವ ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ನಿಂದ ಜನರು ಪ್ರಯೋಜನ ಪಡೆಯಲಿದ್ದಾರೆ. ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಈ ಸಂಧರ್ಭದಲ್ಲಿ ಶುಭ ಹಾರೈಸಿದರು.

ಸಂಸ್ಥೆಯ ವೈಬ್‌ಸೈಟ್‌ನ್ನು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪಾಡಿಯವರು ಉದ್ಘಾಟಿಸಿದರು.

Bayar_kadar_meet_2 Bayar_kadar_meet_3 Bayar_kadar_meet_4 Bayar_kadar_meet_5

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ ಮತ್ತು ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ್, ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ನ ಮಾಲಕ ಸಿದ್ದೀಕ್ ಬಾಯಾರ್ ಮೊದಲಾದವರು ಉಪಸ್ಥಿತರಿದ್ದರು.

ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್ನ ವಿಶೇಷತೆ:
ಗ್ರಾಹಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಖರೀದಿಯನ್ನು 3 ಸುಲಭ ವಿಧಾನದಲ್ಲಿ ಸರಳೀಕರಿಸಲಾಗಿದೆ. ಖರೀದಿಯನ್ನು ಖಾತರಿ ಪಡಿಸಿದವರಿಗೆ ಒಂದು ಗಂಟೆಯೊಳಗೆ ಉತ್ಪನ್ನಗಳನ್ನು ಮನೆಗೆ ತಲುಪಿಸಲಾಗುವುದು. ಗ್ರಾಹಕರು ಒಂದು ಉತ್ಪನ್ನವನ್ನು ಆಯ್ಕೆ ಮಾಡಿದರೆ ಅವರಿಗೆ ಆಯ್ಕೆಗೆ 5 ಉತ್ಪನ್ನಗಳನ್ನು ನೀಡಲಾಗುತ್ತದೆ.

ಅತ್ಯುತ್ತಮ ಗುಣಮಟ್ಟದ ವಸ್ತುಗಳು ಕಡಿಮೆ ದರದಲ್ಲಿ ಸಿಗಲಿದೆ. ಭಾರತೀಯ ಅಂಚೆ ಇಲಾಖೆಯೊಂದಿಗೆ ಕರಾರು ಮಾಡಿಕೊಂಡು ದೇಶಾದ್ಯಂತ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.

ಭಾರತೀಯ ಅಂಚೆ ವ್ಯಾಪ್ತಿಗೆ ಒಳಪಡುವ ಗ್ರಾಮಾಂತರ ಪ್ರದೇಶ ಸೇರಿ ಎಲ್ಲಾ ಮನೆಗಳಿಗೂ ಕ್ಯಾಶ್ ಆನ್ ಡೆಲಿವರಿ ಆಯ್ಕೆಯ ಮೂಲಕವೂ ವಿತರಿಸಲಾಗುವುದು. ಆಯಪ್ ಅಥವಾ ವೈಬ್‌ಸೈಟ್‌ ಮೂಲಕ ಉತ್ಪನ್ನವನ್ನು ಆಯ್ಕೆ ಮಾಡಿ ‘ಆರ್ಡರ್ ತ್ರೂ ವಾಟ್ಸಪ್’ಗೆ ಕ್ಲಿಕ್ ಮಾಡಿ ಗ್ರಾಹಕರು ಹೆಸರಿನೊಂದಿಗೆ ವಾಟ್ಸಾಪ್ ನಂಬರ್ ನೀಡಿದಲ್ಲಿ ಸಂಪರ್ಕಿಸಲಾಗುವುದು.

ಗ್ರಾಹಕರು 9446655111ಗೆ ಸಂದೇಶ ಕಳುಹಿಸಿದರೆ ಪ್ರತಿದಿನ ಅಪ್ಡೇಟ್ ಮಾಡಲಾಗುವುದು. ಆ ಮೂಲಕವು ಖರೀದಿ ಮಾಡಬಹುದಾಗಿದೆ ಎಂದು ಮಾಲಕ ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ನ ಮಾಲಕ ಸಿದ್ದೀಕ್ ಬಾಯಾರ್ ತಿಳಿಸಿದ್ದಾರೆ.

Comments are closed.