ಮುಂಬಯಿ : ಒಂದು ಕಾಲದ ನೀಲಿ ತಾರೆ ಸದ್ಯ ಬಾಲಿವುಡ್‌ನ ಜನಪ್ರಿಯ ನಟಿ ಸನ್ನಿ ಲಿಯೋನ್ ಅವರ ಮುಂದಿನ ಚಿತ್ರದಲ್ಲಿ ನಿಜ ಜೀವನದ ನಾಯಕ ಹಾಸ್ಯ ಪಾತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು ಏಕ್ ಪೆಹಲೀ ಲೀಲಾ ಚಿತ್ರದ ನಾಯಕ ರಜನೀಶ್ ದುಗ್ಗಲ್ ಜೊತೆ ಸನ್ನಿ ನಟಿಸುತ್ತಿರುವ ‘ಬೇಮಾನ್ ಲವ್’ ಚಿತ್ರದಲ್ಲಿ ಪತಿ ಡೇನಿಯಲ್ ವೇಬರ್ ಅಚ್ಚರಿಯೆಂಬ ಹಾಸ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ವರ್ಷ ಡೆಂಜರಸ್ ಹುಸ್ನ್ ಎಂಬ ಚಿತ್ರದಲ್ಲಿ ಸನ್ನಿಗೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಅದೇಕೊ ಆ ಚಿತ್ರ ಬಿದ್ದುಹೋಗಿತ್ತು.
ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಡೇನಿಯಲ್ ಈ ಹಿಂದೆ ಕೆಲ ಬಾಲಿವುಡ್ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
2013 ರಲ್ಲಿ ನಾಸಿರುದ್ದೀನ್ ಶಾ ಜೊತೆ ಸನ್ನಿ ಲಿಯೋನ್ ನಟಿಸಿದ್ದ ಜಾಕ್‌ಪಾಟ್ ಚಿತ್ರದಲ್ಲಿ ಸಣ್ಣ ಹಾಸ್ಯಪಾತ್ರ, 2015 ರಲ್ಲಿ ಏಕ್ ಪೆಹಲಿ ಲೀಲಾ ಚಿತ್ರದಲ್ಲೂ ಸಣ್ಣ ಪಾತ್ರವೊಂದರಲ್ಲಿ ಡೇನಿಯಲ್ ಕಾಣಿಸಿಕೊಂಡಿದ್ದರು. ಗಿಟಾರ್ ವಾದಕರಾಗಿರುವ ಡೇನಿಯಲ್ ಹಲವು ಮ್ಯೂಸಿಕ್ ಅಲ್ಬಮ್‌ಗಳನ್ನೂ ಹೋರ ತಂದಿದ್ದಾರೆ.
ರಾಜೀವ್ ಚೌಧರಿ ನಿರ್ದೇಶನ ವಿರುವ ರೋಮ್ಯಾಂಟಿಕ್ ಮ್ಯೂಸಿಕಲ್ ಚಿತ್ರ ‘ಬೇಮಾನ್ ಲವ್’ ಅಗಸ್ಟ್ ನಲ್ಲಿ ತೆರೆಗೆ ಬರಲಿದೆ.
-ಉದಯವಾಣಿ
Comments are closed.