ಕರ್ನಾಟಕ

ಪತ್ನಿ ಕೊಲೆ ಮಾಡಿ ತೋಟದಲ್ಲಿ ಸುಟ್ಟ ಕಟುಕ

Pinterest LinkedIn Tumblr

Crime-2-1ಬೆಂಗಳೂರು,ಜೂ.೧೬-ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಸುಟ್ಟುಹಾಕಿರುವ ದುರ್ಘಟನೆ ರಾಮನಗರ ತಾಲೂಕಿನ ಕೂಟಗಲ್ ಗ್ರಾಮದ ತೋಟದಲ್ಲಿ ನಡೆದಿದೆ.
ಕೂಟಗಲ್ ವುರ್ತಿ ಪತ್ನಿ ಉಮಾ (೨೭)ಅವರನ್ನು ಕೊಲೆ ಮಾಡಿ ಬಳಿಕ ಶವವನ್ನು ತೋಟದಲ್ಲಿ ಸುಡುತ್ತಿದ್ದ ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮೂರ್ತಿ ತನ್ನ ಪತ್ನಿ ಉಮಾ ಬರ್ಬರವಾಗಿ ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ತೋಟದಲ್ಲಿ ಶವದ ಮೇಲೆ ಕಟ್ಟಿಗೆಗಳನ್ನು ಹಾಕಿ ಸುಡುತ್ತಿದ್ದ ಇದನ್ನು ನೋಡಿದ ಸ್ಥಳಿಯರೊಬ್ಬರು ಇತರರಿಗೆ ವಿಷಯ ತಿಳಿಸಿದ್ದಾರೆ.
ಅಲ್ಲಿಂದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ರಾಮನಗರ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಕೃತ್ಯ ನಡೆಸಿ ಪರಾರಿಯಾಗಿರುವ ಮೂರ್ತಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಕ್ಯಾಬ್ ಚಾಲಕನ ಮನೆಯಲ್ಲಿ ಕಳ್ಳನ ಕೈಚಳಕ
ಬೆಂಗಳೂರು,ಜೂ.೧೬-ಕಿಟಕಿಯಿಂದ ಮನೆಯ ಮುಂಭಾಗಿಲ ಚಿಲಕ ತೆಗೆದು ಒಳನುಗ್ಗಿರುವ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿರುವ ದುರ್ಘಟನೆ ಜೆಪಿನಗರದ ಶಿವಶಕ್ತಿನಗರದಲ್ಲಿ ಇಂದು ನಸುಕಿನಲ್ಲಿ ನಡೆದಿದೆ.
ಶಿವಶಕ್ತಿನಗರದ ೮ನೇ ಕ್ರಾಸ್‌ನಲ್ಲಿ ವಾಸಿಸುತ್ತಿದ್ದ ಕ್ಯಾಬ್ ಚಾಲಕ ವೆಂಕಟೇಶ್ ಅವರ ಪತ್ನಿ ಗೀತಾ ಅವರು ರಾತ್ರಿ ಬಳಿಯ ಕಿಟಕಿ ತೆಗೆದುಕೊಂಡು ಮಲಗಿದ್ದಾಗ ಮುಂಜಾನೆ ಬಂದಿರುವ ದುಷ್ಕರ್ಮಿಯೊಬ್ಬ ಕಿಟಕಿಯ ಕಂಬಿಯೊಳಗೆ ಕೈತೂರಿಸಿ ಮುಂಭಾಗಿಲಿನ ಚಿಲಕ ತೆಗೆದು ಒಳನುಗ್ಗಿದ್ದಾನೆ.
ವೆಂಕಟೇಶ್ ಅವರ ಜೇಬಿನಲ್ಲಿದ್ದ ೧೨೦೦ ರೂ ನಗದು ಗೀತಾ ಅವರ ಕತ್ತಿನಲ್ಲಿದ್ದ ೨೫ಗ್ರಾಂ ತೂಕದ ಮಾಂಗಲ್ಯಸರವನ್ನು ಕಸಿದಿದ್ದಾನೆ ಎಚ್ಚರಗೊಂಡ ಅವರು ಕೂಗಿಕೊಳ್ಳುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ ಪ್ರಕರಣ ದಾಖಲಿಸಿಕೊಂಡಿರುವ ಜೆಪಿನಗರ ಪೊಲೀಸರು ದುಷ್ಕರ್ಮಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಯುವತಿ ಮೇಲೆ ಅತ್ಯಾಚಾರ ಅಡುಗೆಭಟ್ಟ ಬಂಧನ
ಬೆಂಗಳೂರು,ಜೂ.೧೬-ಮನೆಕೆಲಸಕ್ಕಿದ್ದ ಯುವತಿಯ ಮೇಲೆ ನೇಪಾಳ ಮೂಲದ ಅಡುಗೆ ಭಟ್ಟನೊಬ್ಬ ಅತ್ಯಾಚಾರ ನಡೆಸಿದ ಹೀನಕೃತ್ಯ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.
ರಾಜರಾಜೇಶ್ವರಿನಗರದ ರಾಜೀವ್ ರಾಯ್ ಎಂಬುವರ ಮನೆಯಲ್ಲಿ ಮಗು ನೋಡಿಕೊಳ್ಳುತ್ತಿದ್ದ ಜಾರ್ಖಂಡ್ ಮೂಲದ ೨೨ ವರ್ಷದ ಯುವತಿಯ ಮೇಲೆ ಅಡುಗೆ ಮಾಡುತ್ತಿದ್ದ ನೇಪಾಳ ಮೂಲದ ರಾಮ್‌ಸಿಂಗ್ ಬಹದ್ದೂರ್(೧೮) ಅತ್ಯಾಚಾರವೆಸಗಿದ್ದು ಆತನನ್ನು ವಶಕ್ಕೆ ತೆಗೆದುಕಿಂಡು ವಿಚಾರಣೆ ನಡೆಸಲಾಗಿದೆ.
ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳೆದ ಜೂ.೧೪ರಂದು ಸಂತ್ರಸ್ಥ ಯುವತಿ ಒಂಟಿಯಾಗಿದ್ದಾಗ ಆಕೆಯ ಮೇಲೆ ಆರೋಪಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ.
ಯುವತಿಯು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದು ಪೊಲೀಸರಿಗೆ ದೂರು ನೀಡಲಾಗಿದೆ ಪ್ರಕರಣ ದಾಖಲಿಸಿಕೊಂಡ ರಾಜರಾಜೇಶ್ವರಿನಗರ ಪೊಲೀಸರು ಯುವತಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಆರೋಪಿಯನ್ನು ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ಅಜಯ್ ಹಿಲೋರಿ ತಿಳಿಸಿದ್ದಾರೆ.

Comments are closed.