ಕರ್ನಾಟಕ

ಕಲ್ಲಿದ್ದಲು ಬಳಕೆ ಕೇಂದ್ರದ ನಿರ್ಧಾರ ಡಿಕೆಶಿ ಸ್ವಾಗತ

Pinterest LinkedIn Tumblr

dk-shivakumar2ಬೆಂಗಳೂರು, ಜೂ. ೧೬- ಇಂಧನ ಉತ್ಪಾದಿಸಲು ರಾಜ್ಯಕ್ಕೆ ನೀಡಲಾಗುತ್ತಿರುವ ಕಲ್ಲಿದ್ದಲನ್ನು ನಿಗದಿಯಾದ ವಿದ್ಯುತ್ ಸ್ಥಾವರಕ್ಕೆ ಬಳಸದೇ, ಇತರ ಯಾವುದೇ ವಿದ್ಯುತ್ ಸ್ಥಾವರಗಳಿಗೆ ಬಳಸಿಕೊಳ್ಳುವ ಹೊಂದಾಣಿಕೆಗೆ ಅವಕಾಶ ಮಾಡಿಕೊಡುವ ಕೇಂದ್ರ ಸಚಿವ ಸಂಪುಟ ನಿರ್ಧಾರವನ್ನು ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸ್ವಾಗತಿಸಿದ್ದಾರೆ.

ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಈ ನಿಟ್ಟಿನಲ್ಲಿ ಮಾಡಿದ್ದ ಮನವಿಯನ್ನು ಪುರಸ್ಕರಿಸಿ, ಜೂನ್ 4 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಕಾರಣರಾದ ಕೇಂದ್ರದ ಇಂಧನ ಸಚಿವ ಪಿಯೂಷ್ ಗೋಯಲ್‌ರವರನ್ನು ಸಚಿವ ಡಿ.ಕೆ. ಶಿವಕುಮಾರ್ ಅಭಿನಂದಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಚಿವ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಲ್ಲಿದ್ದಲು ಸಾಗಣೆ ವೆಚ್ಚ ಕಡಿಮೆಯಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಸಹ ತಗ್ಗಲಿದೆ ಎಂದಿದ್ದಾರೆ.

ಈ ಮೊದಲು ನಿಗದಿಪಡಿಸಿದ್ದ ಸ್ಥಾವರಗಳಿಗೆ ಮಾತ್ರ ಕಲ್ಲಿದ್ದಲು ಬಳಸಬೇಕಿತ್ತು. ಬೇರೆ ಸ್ಥಾವರಗಳಿಗೆ ಬಳಸಲು ಅವಕಾಶವಿರಲಿಲ್ಲ. ಕೇಂದ್ರದ ಈ ನಿರ್ಧಾರ ರಾಜ್ಯಗಳಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.