ಪಂಜಾಬ್: ಸಂಪ್ರದಾಯದಂತೆ ಬರಿಗಾಲಲ್ಲಿ ತಂದೆ ಕೆಂಡ ಹಾಯುವ ವೇಳೆ 6 ವರ್ಷದ ಮಗನನ್ನು ಎತ್ತಿಕೊಂಡು ನಡೆಯುತ್ತಿರುವಾಗ ಆಯತಪ್ಪಿದ ಪರಿಣಾಮ ಮಗುವನ್ನು ಬೆಂಕಿ ಕೆಂಡದ ಮೇಲೆ ಎಸೆದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ಭಾನುವಾರ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತನ್ನ 6 ವರ್ಷದ ಪುತ್ರ ಕಾರ್ತಿಕ್ ನನ್ನು ಕೈಯಲ್ಲಿ ಎತ್ತಿಕೊಂಡು ಉರಿಯುತ್ತಿರುವ ಕಲ್ಲಿದ್ದಲ ಕೆಂಡದ ಮೇಲೆ ತಂದೆ ಬರಿಗಾಲಲ್ಲಿ ನಡೆಯುತ್ತಿದ್ದ ವೇಳೆ ಆಯತಪ್ಪಿ ಬಿದ್ದಿರುವ ಘಟನೆ ನಡೆದಿದೆ. ಜಲಂಧರ್ ನ ಮಾ ಮಾರಿಯಮ್ಮಾ ವಾರ್ಷಿಕ ಜಾತ್ರೆ ವೇಳೆ ಈ ದುರ್ಘಟನೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದು ದೇವರ ಸಂಪ್ರದಾಯ ಹಾಗಾಗಿ ಮಗುವನ್ನು ಆಸ್ಪತ್ರೆಗೆ ಸೇರಿಸಲು ಮಗುವಿನ ಪೋಷಕರು ಹಠ ಹಿಡಿದಿದ್ದರು. ಆದರೆ ಸ್ಥಳದಲ್ಲಿದ್ದ ಭಕ್ತರು ಮಗುವನ್ನು ಬಲವಂತದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಂಪ್ರದಾಯದ ಹೆಸರಿನಲ್ಲಿ ಪುಟ್ಟ ಬಾಲಕನನ್ನು ಉರಿಯುತ್ತಿರುವ ಕಲ್ಲಿದ್ದಲಿನ ಮೇಲೆ ಎಸೆದಿರುವ ಭೀಕರ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ಭಾನುವಾರ ನಡೆದಿದ್ದು, ಗಂಭೀರವಾದ ಸುಟ್ಟುಗಾಯಗೊಂಡಿರುವ 6 ವರ್ಷದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿನ ಕಾಲು, ಕೆನ್ನೆಗೆ ಸುಟ್ಟ ಗಾಯವಾಗಿದೆ ಎಂದು ವರದಿ ವಿವರಿಸಿದೆ. ಹಬ್ಬದಲ್ಲಿ ಸುಮಾರು 600 ಮಂದಿ ಭಕ್ತರು ಭಾಗವಹಿಸಿದ್ದರು.
-ಉದಯವಾಣಿ
Comments are closed.