
ನಾಗ್ಪುರ: ಇಷ್ಟುದಿನ ಪ್ರಾಣಿಗಳ ರೀತಿ, ನಾಲ್ಕು, ಎಂಟು ಕಾಲು ಕೈಗಳಿರುವ ಮಕ್ಕಳು ಜನಿಸಿದ್ದನ್ನು ನೋಡಿದ್ದೀರ. ಆದ್ರೆ ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಚಿತ್ರ ಮಗುವೊಂದು ಜನಿಸಿದ್ದು, ಈ ಮಗುವಿಗೆ ಚರ್ಮವೇ ಇಲ್ಲವಾಗಿದೆ.
3 ಲಕ್ಷ ಮಕ್ಕಳಲ್ಲಿ ಒಬ್ಬರು ಈ ರೀತಿ ವಿಚಿತ್ರವಾಗಿ ಜನಿಸುತ್ತಾರೆ ಎನ್ನಲಾಗಿದ್ದು, ವಂಶವಾಹಿ(ಜೀನ್ಸ್) ಸಮಸ್ಯೆಯಿಂದ ಹೊರ ಚರ್ಮವಿಲ್ಲದೇ ಹುಟ್ಟುತ್ತಾರೆ. ಇದಕ್ಕೆ ಹರ್ಲೆಕ್ವಿನ್ ಮತ್ಸ್ಯವ್ಯಾಧಿ(ಮೀನುದೊಗಲು ರೋಗ) ಎಂದು ಕರೆಯಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಈ ಅನುವಂಶಿಕ ಚರ್ಮರೋಗಕ್ಕೆ ತುತ್ತಾದ ಮಗುವಿನ ಬಿಳಿ ಚರ್ಮ ಅಲ್ಲಲ್ಲಿ ಬಿರುಕು ಮೂಡಿರುತ್ತೆ. ಅಲ್ಲದೇ ಮಗುವಿನ ಕಣ್ಣು ಕಿವಿ ಬಾಯಿ ಇನ್ನಿತರ ಅಂಗಾಂಗಳು ಅಸಹಜವಾಗಿ ಬೆಳೆದಿರುತ್ತದೆ. ಇಂತಹ ಮಗುವಿನ ಚರ್ಮವನ್ನ ವೃದ್ಧಿಸಲು ಪೆಟ್ರೋಲಿಯಂ ಜೆಲ್ಲಿ(ವ್ಯಾಸಲಿನ್‍ನಂತಹ ಕ್ರೀಮ್) ಹಾಗೂ ತೆಂಗಿನ ಎಣ್ಣೆ ಸಹಾಯಕವಾಗುತ್ತವೆ ಎನ್ನುವುದು ವೈದ್ಯರ ಸಲಹೆಯಾಗಿದೆ.
ಸದ್ಯ ನಾಗ್ಪುರದಲ್ಲಿ ಹುಟ್ಟಿರುವ ಈ ಅಸಹಜ ಮಗುವನ್ನು ವೈದ್ಯರು ಅಬ್ಸರ್ವೇಶನ್‍ನಲ್ಲಿ ಇಡಲಾಗಿದ್ದು, ಮಗುವಿನ ಚರ್ಮದ ಬೆಳವಣಿಗೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
Comments are closed.