ಅಂತರಾಷ್ಟ್ರೀಯ

ಇನ್ನೆಂದೂ ಅಮೇರಿಕ ಬಳಿ ಎಫ್ 16 ಯುದ್ಧ ವಿಮಾನ ಕೇಳುವುದಿಲ್ಲ: ಪಾಕಿಸ್ತಾನ

Pinterest LinkedIn Tumblr

pakistan-2ಇಸ್ಲಾಮಾಬಾದ್: ಪಾಕಿಸ್ತಾನ ಅಮೆರಿಕಾದಿಂದ ಎಫ್ 16 ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಅಂತ್ಯ ಹಾಡಿದ್ದು ಇನ್ನೆಂದೂ ಅಮೇರಿಕ ಬಳಿ ಎಫ್-16 ಯುದ್ಧ ವಿಮಾನಕ್ಕಾಗಿ ಬೇಡಿಕೆ ಇಡುವುದಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪಾಕಿಸ್ತಾನದ ರಕ್ಷಣಾ ಇಲಾಖೆ ಸ್ಥಾಯಿ ಸಮಿತಿಗೆ ವಿವರಣೆ ನೀಡಿರುವ ಪಾಕ್ ಅಧಿಕಾರಿ ಅಜೀಜ್ ಚೌಧರಿ, ಪಾಕಿಸ್ತಾನದ ನಿರ್ಧಾರದಿಂದ ಅಮೆರಿಕಾಗೆ ಸಂತಸವಾಗಿರಬೇಕು ಎಂದು ಹೇಳಿದ್ದಾರೆ. ಪಾಕಿಸ್ತಾನ ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಈ ಬೆಳವಣಿಗೆಗೆ ಕಾರಣವಾಗಿದ್ದು ಅಮೆರಿಕದೊಂದಿಗಿನ ಸಂಬಂಧದ ಹದಗೆಟ್ಟಿದೆ, ಸಂಬಂಧ ಹದಗೆಡುವುದು ಪಾಕಿಸ್ತಾನಕ್ಕೆ ಹೊಸ ವಿಷಯವೇನಲ್ಲ ಎಂದು ಹೇಳಿದ್ದಾರೆ. ಇನ್ನು ಭಯೋತ್ಪಾದಕರ ವಿರುದ್ಧ ಅಮೇರಿಕ ನಡೆಸುತ್ತಿರುವ ಯುದ್ಧದ ಬಗ್ಗೆಯೂ ಮಾತನಾಡಿರುವ ಪಾಕಿಸ್ತಾನ, ಅಮೇರಿಕ 16 ವರ್ಷಗಳು ಉಗ್ರರ ವಿರುದ್ಧ ಯುದ್ಧ ಮಾಡುವುದರಲ್ಲೇ ಕಳೆದಿದೆ. ಆದರೆ ಶಾಂತಿಗಾಗಿ 6 ವರ್ಷಗಳ ಸಮಯವನ್ನು ಮೀಸಲಿಟ್ಟಿದ್ದರೆ ಪರಿಸ್ಥಿತಿ ಬೇರೆಯದ್ದಾಗಿರುತ್ತಿತ್ತು ಎಂದು ಪಾಕ್ ಅಭಿಪ್ರಾಯಪಟ್ಟಿದೆ.

Comments are closed.