ಕರ್ನಾಟಕ

ಮರಾಠಿಯ ಸೈರಾಟ್ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗುತ್ತಂತೆ

Pinterest LinkedIn Tumblr
Rockline Venkatesh @ Ravi Teja Rockline Entertainments Movie Opening Stills
Rockline Venkatesh 

ಬೆಂಗಳೂರು: ಮರಾಠಿ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿರುವ ಸಿನಿಮಾ ಸೈರಾಟ್. ಈಗಾಗಲೇ ದೇಶದಾದ್ಯಂತ ಸುದ್ದಿ ಮಾಡಿರುವ ಈ ಸಿನಿಮಾವನ್ನು ಕನ್ನಡದಕ್ಕೆ ತರೋದಕ್ಕೆ ಮುಂದಾಗಿದ್ದಾರೆ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಈಗಾಗಲೇ ಸಿನಿಮಾದ ರಿಮೇಕ್ ಹಕ್ಕನ್ನು ಪಡೆದುಕೊಂಡಿದ್ದಾರಂತೆ ರಾಕ್ ಲೈನ್.

ಈಗಾಗಲೇ ಮರಾಠಿ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ಅವರು ಕನ್ನಡದಲ್ಲಿ ರಿಮೇಕ್ ಮಾಡೋದಕ್ಕೆ ಮುಂದಾಗಿದ್ದಾರೆ.

ಅಂದ್ಹಾಗೆ ಕನ್ನಡದಲ್ಲಿ ಮಾತ್ರವಲ್ಲದೇ ಮಲೆಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿಯೂ ಸಾಯ್ರತ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರಂತೆ ರಾಕ್ ಲೈನ್ ವೆಂಕಟೇಶ್.ಅದಕ್ಕಾಗಿ ಈಗಾಗಲೇ ಅವರು ರಿಮೇಕ್ ಹಕ್ಕನ್ನು ಪಡೆದುಕೊಂಡಿದ್ದಾರಂತೆ.

ಅಂದ್ಹಾಗೆ ಸೈರಾಟ್ ಸಿನಿಮಾ ಮರಾಠಿಯಲ್ಲಿ ರಿಲೀಸ್ ಆದ ರಿಲೀಸ್ ಆದ ಕೆಲವೇ ವಾರದಲ್ಲಿ ಬರೋಬ್ಬರಿ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೈರಾಟ್ ಸಿನಿಮಾ ಮೇಡ್ಜಾತಿಗೆ ಸೇರಿದ ಹುಡುಗಿ ಹಾಗೂ ಕೆಳಜಾತಿಯ ಹುಡುಗನ ನಡುವಿನ ಪ್ರೇಮಕಥೆ ಆಧಾರಿತ ಸಿನಿಮಾವಂತೆ.

ಇನ್ನು ಈ ಸಿನಿಮಾವನ್ನು ರಿಮೇಕ್ ಮಾಡುತ್ತಿರುವ ಬಗ್ಗೆ ಹೇಳಿರುವ ರಾಕ್ ಲೈನ್ ವೆಂಕಟೇಶ್ ವರು ನಾನು ಯಾವಾಗಲೂ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಿರುತ್ತೇನೆ. ಸಾಯ್ರತ್ ಸಿನಿಮಾ ಕೂಡ ನನಗೆ ನೋಡಿದಾಗ ತುಂಬಾ ಇಷ್ಟವಾಗಿ ಅದನ್ನು ಕನ್ನಡಕ್ಕೆ ತಂದಿದ್ದೇನೆ ಅಂತಾ ಹೇಳಿದ್ದಾರೆ.

Comments are closed.