ಮುಂಬೈ (ಪಿಟಿಐ): ‘ಉಡ್ತಾ ಪಂಜಾಬ್’ ಚಿತ್ರ ಬಿಡುಗಡೆಗೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್ ಚಿತ್ರದ ಒಂದು ದೃಶ್ಯಕ್ಕೆ ಕತ್ತರಿ ಹಾಕುವಂತೆ ಚಿತ್ರತಂಡಕ್ಕೆ ನಿರ್ದೇಶನ ನೀಡಿದೆ.
ಅಲ್ಲದೆ, ‘ಸೆನ್ಸಾರ್ ಮಂಡಳಿಯು ಅಡಗೂಲಜ್ಜಿಯಂತೆ ವರ್ತಿಸದೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು’ ಎಂದು ನ್ಯಾಯಪೀಠ ಹೇಳಿದೆ.
‘ಚಿತ್ರಗಳ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹೇಳುವ ಯಾವುದೇ ಆಧಿಕಾರ ಸೆನ್ಸಾರ್ ಮಂಡಳಿಗೆ ಇಲ್ಲ. ಸಿನಿಮಾಟೊಗ್ರಾಫ್ ಕಾಯ್ದೆಯಲ್ಲಿ ‘ಸೆನ್ಸಾರ್’ ಎಂಬ ಪದವೇ ಇಲ್ಲ. ಹೀಗಾಗಿ ದೃಶ್ಯಗಳನ್ನು ತೆಗೆಯುವಂತೆ ಹೇಳುವ ಕಾನೂನುಬದ್ಧ ಅಧಿಕಾರ ಸೆನ್ಸಾರ್ ಮಂಡಳಿಗೆ ಇಲ್ಲ’ ಎಂದು ನ್ಯಾಯಾಲಯ ತಿಳಿಸಿದೆ.
‘ಉಡ್ತಾ ಪಂಜಾಬ್ ಚಿತ್ರಕಥೆಯಲ್ಲಿ ದೇಶದ ಏಕತೆಗೆ ಧಕ್ಕೆಯಾಗುವಂಥ ಯಾವುದೇ ಅಂಶಗಳಿಲ್ಲ. ಚಿತ್ರವು ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೇಳುತ್ತದೆ. ಸಂದೇಶ ರವಾನಿಸಲು ಚಿತ್ರತಂಡ ಆರಿಸಿಕೊಂಡಿರುವ ಮಾರ್ಗ ಅದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Comments are closed.