ಕರ್ನಾಟಕ

ಕೋಲಾರ ಶಾಶ್ವತ ನೀರಾವರಿ ಹೋರಾಟ: ಬೀದಿಗಿಳಿದ ಕನ್ನಡ ಚಿತ್ರೋದ್ಯಮ ಮಂದಿ ಹೇಳಿದ್ದೇನು ಗೊತ್ತಾ…?

Pinterest LinkedIn Tumblr

kolara film

ಕೋಲಾರ: ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಬೆಂಬಲ ಸೂಚಿಸಿದೆ. ಇದಕ್ಕೆ ಇಂದು ಚಿತ್ರರಂಗದ ಶಿವರಾಜ್ ಕುಮಾರ್, ಯಶ್, ರಾಗಿಣಿ, ಪೂಜಾ ಗಾಂಧಿ, ರಾಕ್‍ಲೈನ್ ವೆಂಕಟೇಶ್, ಚಿರಂಜಿವಿ ಸರ್ಜಾ, ಸಾಧು ಕೋಕಿಲ ಹಾಗೂ ಸಾ.ರಾ.ಗೋವಿಂದು, ಬುಲೆಟ್ ಪ್ರಕಾಶ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ಬೆಂಬಲಿಸಿದರು.

kolara film1

ವೇದಿಕೆಯಲ್ಲಿ ಮಾತನಾಡಿದ ನಟ ಶಿವರಾಜ್‍ಕುಮಾರ್, ನಿಮಗೆ ತೊಂದ್ರೆ ಆದ್ರೆ ನಾನು ಬರ್ತಿನಿ. ನಿಮ್ಮ ಎಲ್ಲಾ ಸಮಸ್ಯೆಗೆ ನಾವಿದ್ದೇವೆ ಎಂದರು ಇದಕ್ಕೂ ಮೊದಲು ಮಾತನಾಡಿದ ನಟ ಯಶ್ ಕೋಲಾರ ಜನ ತಿರುಗಿ ಬೀಳೋ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ನೀರು ಹರಿಸಬೇಕೆಂದು ಒತ್ತಾಯಿಸಿದ್ರು. ಇನ್ನು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ಅರುಣ್ ಸಾಗರ್, ಸಾದು ಕೋಕಿಲ ಮಾತನಾಡಿ ಕೋಲಾರ ಜಿಲ್ಲೆಗೆ ತುರ್ತಾಗಿ ನೀರಿನ ವ್ಯವಸ್ಥೆ ಮಾಡಿಕೊಡಬೇಕು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಮುಖ್ಯವಾಗಿ ಕುಡಿಯುವ ನೀರು ಅವಶ್ಯಕ, ಎಲ್ಲರೂ ಒಗ್ಗಟ್ಟಿನಿಂದ ನೀರಿಗಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದರು.

ಇದಾದ ಬಳಿಕ ಮಾತನಾಡಿದ ನಟಿ ರಾಗಿಣಿ ನೀರು ಜೀವನಕ್ಕೆ ಅತಿ ಮುಖ್ಯ. ಈ ವಿಚಾರವನ್ನು ಗಂಭೀರವಾಗಿ ತಗೊಂಡು ಹೋರಾಟ ಮಾಡಬೇಕು, ಇಡೀ ಚಿತ್ರರಂಗ ನಿಮ್ಮೊಂದಿಗೆ ಇದೆ ಎಂದ್ರು. ಪೂಜಾಗಾಂಧಿ ಮಾತನಾಡಿ ನೆಲಕ್ಕೆ ಬೆಂಕಿ ಬಿದ್ರೆ ನೀರಿಂದ ಆರಿಸಬಹುದು, ನೀರಿಗೆ ಬೆಂಕಿ ಬಿದ್ರೆ ಯಾವುದರಿಂದ ಅರಿಸ್ತಿರಾ. ಹಾಗಾಗಿ ಎಲ್ಲರು ನೀರಿಗಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದ್ರು. ಕಳಸಾ ಬಂಡೂರಿ ಹೋರಾಟ ಮಾಡ್ತಿದ್ದಾರೆ, ಅ ಸಮಸ್ಯೆ ಇನ್ನು ಬಗೆ ಹರಿದಿಲ್ಲ. ಸರ್ಕಾರ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ಸಾ.ರಾ.ಗೋವಿಂದ ಅಂದು ರಾಜ್‍ಕುಮಾರ್ ನೇತೃತ್ವದಲ್ಲಿ ಗೋಕಾಕ್ ಚಳವಳಿ ಇಂದು ಶಿವರಾಜ್ ಕುಮಾರ್ ಸಮ್ಮುಖದಲ್ಲಿ ಕೋಲಾರ ಶಾಶ್ವತ ನೀರಿಗಾಗಿ ಹೋರಾಟ ನಡೆಯುತ್ತಿದೆ. ಹಿಂದೆ ಸ್ವಾತಂತ್ರ್ಯ ಪಡೆದುಕೊಳ್ಳಲು ಚಳವಳಿ ಮಾಡಲಾಗಿತ್ತು. ಅದೇ ರೀತಿ ನಾವು ಉಗ್ರ ಹೋರಾಟ ಮಾಡಬೇಕು. ನಮ್ಮ ಬೇಡಿಕೆ ಈಡೇರದಿದ್ರೆ ತೆರಿಗೆ ಕಟ್ಟುವುದಿಲ್ಲ ಅಂತ ಪ್ರತಿಜ್ಞೆ ಮಾಡಬೇಕು. ಸರ್ಕಾರದ ವಿರುದ್ಧ ನಮ್ಮ ಹೋರಾಟ ಅಲ್ಲ. ಬರೀ ನೀರಿಗಾಗಿ ಮಾತ್ರ ನಮ್ಮ ಹೋರಾಟ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ನೀರಾವರಿ ಯೋಜನೆಗಳಿಗೆ ಹೋರಾಟ ನಡೆಯುತ್ತಿದ್ರು ಬೇಡಿಕೆ ಈಡೇರಿಸಿಲ್ಲ. ಈಗಲಾದರೂ ಎಚ್ವೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸಬೇಕು. ಚಿತ್ರೋದ್ಯಮ ನಿಮ್ಮೊಂದಿಗಿದೆ ಎಂದು ಹೇಳಿದರು.

Comments are closed.