ರಾಷ್ಟ್ರೀಯ

ಪ್ರತಿ ವರ್ಷ ಭಾರತದ 2,500 ಮಕ್ಕಳಿಗೆ ಬ್ರೇನ್ ಟ್ಯೂಮರ್!

Pinterest LinkedIn Tumblr

brain-cancer-web-ನವದೆಹಲಿ: ವಿಶ್ವದಲ್ಲಿ ಮೆದುಳಿನ ಕಾಯಿಲೆಗಳು ಅಧಿಕವಾಗುತ್ತಿವೆ. ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ. ದೇಶದಲ್ಲಿ ಪ್ರತಿ ವರ್ಷ ಸುಮಾರು 2,500 ಮಕ್ಕಳು ಮೆಡುಲ್ಲೊಬ್ಲಾಸ್ಟೊಮಾ (ಮೆದುಳಗಡ್ಡೆ- ಬ್ರೇನ್ ಟ್ಯೂಮರ್) ಎಂಬ ಪ್ರಾಥಮಿಕ ಮೆದುಳಿನ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಒಟ್ಟು 40,000ದಿಂದ 50,000 ಜನರು ಪ್ರತಿ ವರ್ಷ ಮೆದುಳು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 20ರಷ್ಟು ಮಕ್ಕಳು ಎಂಬುದು ಆತಂಕಕಾರಿ. ಒಂದು ವರ್ಷದ ಹಿಂದೆ ಈ ಕಾಯಿಲೆ ಶೇಕಡಾ ಐದರಷ್ಟು ಮಾತ್ರ ಇತ್ತು. ಆದರೆ ಇದೀಗ ಹೆಮ್ಮರವಾಗಿ ಬೆಳೆದಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇಂಥಹ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಮುಂದೆ ಆಗುವ ಅನಾಹುತವನ್ನು ತಡೆಯಲು ಸಾಧ್ಯ. ಶೇಕಡಾ ತೊಂಭತ್ತರಷ್ಟು ಮೆಡುಲ್ಲೊಬ್ಲಾಸ್ಟೊಮಾ ರೋಗಕ್ಕೆ ತುತ್ತಾದವರಿಗೆ ಆರಂಭದಲ್ಲೇ ಚಿಕಿತ್ಸೆ ನೀಡಿ ಕಾಯಿಲೆ ಗುಣಪಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ರೋಗದ ಕುರಿತು ಬಿಎಲ್ಕೆ ಆಸ್ಪತ್ರೆಯ ನಿರ್ದೇಶಕ ಹಾಗೂ ಶಸ್ತ್ರಚಿಕಿತ್ಸಕ ವಿಕಾಸ್ ಗುಪ್ತಾ ಪ್ರತಿಕ್ರಿಯಿಸಿದ್ದು, ರೋಗದ ಆರಂಭಿಕ ಲಕ್ಷಣವಾಗಿ ತಲೆಶೂಲೆ ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಚಿಕಿತ್ಸೆ ಪಡೆದರೆ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಮಕ್ಕಳಿಗಾದರೆ ಚಿಕಿತ್ಸೆ ಪಡೆದ ನಂತರ 70ರೊಂ 80 ವರ್ಷ ಜೀವಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Comments are closed.