ಕರ್ನಾಟಕ

ವಿಪ್ ಉಲ್ಲಂಘಿಸಿದ ಶಾಸಕರ ವಿರುದ್ಧ ಶಿಸ್ತುಕ್ರಮ: ಜೆಡಿಎಸ್ ಕಾರ್ಯಕರ್ತರ ಆಗ್ರಹ

Pinterest LinkedIn Tumblr

jdssಬೆಂಗಳೂರು: ಒಳಗೆ ಜೆಡಿಎಸ್ ಸಮಾವೇಶ ನಡೆಯುತ್ತಿದ್ದರೆ ಹೊರಗೆ ಜೆಡಿಎಸ್ ಬೆಂಬಲಿಗರು ಭಿನ್ನಮತೀಯರ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅರಮನೆ ಮೈದಾನದಲ್ಲಿ ಜೆಡಿಎಸ್ ಸಮಾವೇಶ ನಡೆಯುತ್ತಿದ್ದು, ಒಳಗೆ ಸಭೆ ನಡೆಯುತ್ತಿದ್ದರೆ ಹೊರಗೆ ಬಂಡಾಯ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಇದಕ್ಕೆ ಮುನ್ನ ದೇವೇಗೌಡರು ಅರಮನೆ ಮೈದಾನದಲ್ಲಿ ಸಮಾವೇಶಕ್ಕೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ದೇವೇಗೌಡರಿಗೆ ಮುತ್ತಿಗೆ ಹಾಕಿ ಬಂಡಾಯ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಇಷ್ಟು ದಿನಗಳ ಕಾಲ ಪಕ್ಷ ಹಾಳಾಗುತ್ತಿದ್ದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಭಿನ್ನಮತೀಯ ಶಾಸಕರ ಭಾವಚಿತ್ರಗಳನ್ನು ಹರಿದುಹಾಕಿ, ಅಸಭ್ಯ ಮಾತುಗಳಿಂದ ಅವರನ್ನು ನಿಂದಿಸಿದರು. ಮಂಡ್ಯದಲ್ಲೂ ಕೂಡ ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ ಮತ್ತು ರಮೇಶ್ ಬಂಡಿ ಸಿದ್ದೇಗೌಡ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು.

ಭಿನ್ನಮತೀಯ ಶಾಸಕರು ತಾವಾಗಿಯೇ ಹೋಗಲಿ ಎಂದು ಜೆಡಿಎಸ್ ವರಿಷ್ಠ ಮಂಡಳಿ ಕಾಯುತ್ತಿದ್ದರೆ ಭಿನ್ನಮತೀಯ ಶಾಸಕರು ತಮ್ಮ ಮೇಲೆ ವರಿಷ್ಠರು ಶಿಸ್ತುಕ್ರಮ ಕೈಗೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಆದರೆ ಜೆಡಿಎಸ್ ಮಾತ್ರ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಮೀನಾ ಮೇಷ ಎಣಿಸುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಮ್ಮ ಪುತ್ರ ನಟಿಸಿರುವ ಜಾಗ್ವಾರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳಿದ್ದು, ಸಮಾವೇಶದಲ್ಲಿ ಗೈರುಹಾಜರಾಗಿದ್ದರು.

Comments are closed.