ಮುಂಬೈ: ದಕ್ಷಿಣ ಭಾರತದ ನಟಿ ತಮನ್ನಾ ಭಾಟಿಯಾ ಸದಾ ಬೋಲ್ಡ್ ಆಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅವರು ಇವತ್ತು ಟ್ರೇಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾರಿಯಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ನ್ಯಾಪ್ ಚಾಟ್‌ಲ್ಲಿ ಗುಡ್ ಮಾರ್ನಿಂಗ್ ಅಂತ ವಿಶ್ ಮಾಡಿದ್ದಾರೆ.
ದಕ್ಷಿಣ ಭಾರತದಲ್ಲಿ ತಮನ್ನಾ ಭಾಟಿಯಾ ಫೇಮಸ್ ನಟಿಯಾಗಿದ್ದಾಳೆ.. ಇತ್ತೀಚೆಗಷ್ಟೆ ಅವರು ಸ್ನ್ಯಾಪ್ ಚಾಟ್‌ಲ್ಲಿ ಸೇರ್ಪಡೆಗೊಂಡಿದ್ದರು. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತಸವನ್ನುಂಟು ಮಾಡಿತ್ತು.
ಅಲ್ಲದೇ ನಿತ್ಯವೂ ಫ್ಯಾನ್ಸ್‌ಗಳಿಗೆ ವಿಶ್ ಮಾಡುವ ತಮನ್ನಾ.. ಇವತ್ತು ವೈಟ್ ಕಲರ್ ಸ್ಯಾರಿ ಧರಿಸಿ ಸ್ಲೀವ್‌ಲೆಸ್ ರವಿಕೆ ತೊಟ್ಟಿದ್ದ ತಮನ್ನಾ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಟ್ರೇಡಿಷನಲ್ ಆಗಿ ಕಾಣಿಸಿಕೊಳ್ಳುವುದರ ಮೂಲಕ ಅವರ ಅಭಿಮಾನಿಗಳಿಗೆ ಸರಪ್ರೈಜ್ ಮೂಡಿಸಿದ್ದರು. ಇನ್ನೂ ತಮನ್ನಾ ಭಾಟಿಯಾ ಇದೀಗ ಬಾಹುಬಲಿ-2 ಚಿತ್ರಕ್ಕಾಗಿ ಕುದುರೆ ಓಡಿಸುವುದನ್ನು ಕಲಿತಿದ್ದಾರಂತೆ. ತಮನ್ನಾಗೆ ತರಬೇತಿ ನೀಡಲು 20 ಕುದುರೆಗಳು ಫಿಲ್ಮಂ ಸಿಟಿಯಲ್ಲಿ ಕಾಯುತ್ತಿವೆಯಂತೆ.ಎಸ್. ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರಕ್ಕಾಗಿ ತಮನ್ನಾ ಕುದುರೆ ಓಡಿಸುವುದನ್ನು ಕಲಿಯುತ್ತಿದ್ದಾರೆ.
ತೆಲುಗಿನ ಖ್ಯಾತ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಬಾಹುಬಲಿ-2 ಚಿತ್ರದ ಕಳೆದ ವರ್ಷ ಬಿಡುಗಡೆಯಾಗಿ ಕೋಟಿಗಟ್ಟಲೆ ಸಂಪಾದನೆ ಮಾಡಿತ್ತು.. ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು.. ಬಾಹುಬಲಿ ಸಿನಿಮಾ ಇಷ್ಟಪಟ್ಟ ಅಭಿಮಾನಿಗಳು ಮುಂದುವರೆದ ಭಾಗ ನೋಡಲು ತುಂಬಾ ಕಾತುರದಲ್ಲಿದ್ದಾರೆ.
ಅಂದಹಾಗೆ ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ಬಾಹುಬಲಿ -2 ಸಿನಿಮಾ ಜುಲೈ 2ಕ್ಕೆ ರಿಲೀಸ್ ಆಗಲಿದೆ.
Comments are closed.