ಅಂತರಾಷ್ಟ್ರೀಯ

ಇರಾಕ್ ನಲ್ಲಿ 45 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

Pinterest LinkedIn Tumblr

Islamic-Stateಬಾಗ್ಧಾದ್: ಇರಾಕ್ ನ ಮೋಸುಲ್ ನಗರದ ಸೇನಾ ನೆಲೆಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ಮಾಡಿದ ಸಂದರ್ಭದಲ್ಲಿ ಕನಿಷ್ಠ ೪೫ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ಅಧಿಕಾರಿ ಬುಧವಾರ ಹೇಳಿದ್ದಾರೆ.
ಕಯ್ಯಾರ ಬಳಿ ಹಲವಾರು ಉಗ್ರರು ಮಂಗಳವಾರ ಇರಾಕಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದವು ಎಂದು ಅಧಿಕಾರಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
“ಅಮೆರಿಕಾ ಸಹಭಾಗಿತ್ವದ ನಮ್ಮ ಪಡೆಗಳು, ಪ್ರತಿ ವಾಯು ದಾಳಿಯನ್ನು ನಡೆಸಿ, ಸುಮಾರು ಘಂಟೆಗಳ ಕಾಲ ಘರ್ಷಣೆ ಜಾರಿಯಲ್ಲಿತ್ತು” ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಈ ಘರ್ಷಗಳಲ್ಲಿ ಐವರು ಭದ್ರತಾ ಸಿಬ್ಬಂದಿ ಕೂಡ ಮರಣ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪವಿತ್ರ ರಂಜಾನ್ ತಿಂಗಳಲ್ಲೂ ಕೂಡ ಐ ಎಸ್ ಉಗ್ರರು ದಾಳಿಯನ್ನು ಮುಂದುವರೆಸಿದ್ದಾರೆ.

Comments are closed.