
ಬೆಂಗಳೂರು: ಡಿವೈಎಸ್‍ಪಿ ಅನುಪಮಾ ಶೆಣೈ ಫೇಸ್‍ಬುಕ್ ವಾರ್ ಮುಂದುವರೆಸಿದ್ದು ಟೈಂ ಬಾಂಬ್ ಹಾಕುತ್ತಲೇ ಇದ್ದಾರೆ. ತನ್ನ ವಿರುದ್ಧ ಸಾಮಾಜಿಕ ತಾಣಗಳಲ್ಲಿನ ಟೀಕೆಗೆ ಎದಿರೇಟು ಕೊಟ್ಟಿರುವ ಅನುಪಮಾ, ನಾನು ಉತ್ತರಕುಮಾರಳೇ ಅಂದಿದ್ದಾರೆ. ಬೃಹನ್ನಳೆಗೆ ಬೃಹನ್ನಳೆತನ ಬಿಡಿಸಿ ಕೌರವನ ವಿರುದ್ಧ ಯುದ್ಧ ಮಾಡಿಸಿದವಳು ಎಂದು ಖಾರವಾಗಿ ಸ್ಟೇಟಸ್ ಹಾಕಿದ್ದಾರೆ.
ಸರ್ಕಾರ ಎಚ್ಚರಿಕೆ ಕೊಡುವ ಪ್ರಯತ್ನ ಮಾಡುತ್ತಿದ್ದರೆ ಅನುಪಮಾ ಶೆಣೈ ಯಾವುದಕ್ಕೂ ಬಗ್ಗುತ್ತಲೇ ಇಲ್ಲ. ಇದೀಗ ರಾಜಕಾರಣಿಗಳನ್ನು ನಾಯಿಗಳಿಗೆ ಹೋಲಿಸಿ ವಿವಾದ ಹುಟ್ಟುಹಾಕಿದ್ದಾರೆ. ಖ್ಯಾತ ವಕೀಲರಾದ ನಾನಿ ಪಾಲ್ಕಿವಾಲಾ ಅವರ ಸಾಲುಗಳನ್ನು ಬರೆದಿರುವ ಅನುಪಮಾ ರಾಜಕಾರಣಿಗಳನ್ನು ನಾಯಿಗೆ ಹೋಲಿಸಿದ್ದಾರೆ.
ನಾನಿ ಪಲ್ಕಿವಾಲಾ ಬರೆಯುತ್ತಾರೆ
ನನ್ನ ನಾಯಿ ದಿನಕ್ಕೆ 20 ಗಂಟೆ ಮಲಗಿರುತ್ತದೆ ತನ್ನ ಅಹಾರವನ್ನ ತಾನೇ ಪಡೆಯುತ್ತದೆ. ವರ್ಷಪೂರ್ತಿ 24 ಗಂಟೆಗಳಲ್ಲಿ ಯಾವ ಸಮಯದಲ್ಲಿ ಎಲ್ಲಿ ಬೇಕಾದರೂ ಅದು ಆಹಾರ ಸ್ವೀಕರಿಸಬಹುದು. ಅದು ಕೂಡ ಉಚಿತವಾಗಿ. ತಾನು ತಿನ್ನುವ ಆಹಾರಕ್ಕೆ ಆ ನಾಯಿಗೆ ಹಣ ಖರ್ಚಾಗುವುದಿಲ್ಲ. ವರ್ಷಕ್ಕೊಮ್ಮೆ ನಾಯಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. ವೈದ್ಯಕೀಯ ಪರೀಕ್ಷೆಗಾಗಲೀ, ಮೆಡಿಕಲ್ ಇನ್ಶೂರೆನ್ಸ್‍ಗಾಗಲೀ ನಾಯಿ ಏನನ್ನೂ ಕೊಡಬೇಕಾಗಿಲ್ಲ. ತನ್ನ ಅಗತ್ಯಕ್ಕಿಂತಲೂ ದೊಡ್ಡದಾದ ಜಾಗದಲ್ಲಿ ಅದು ಸುಖವಾಗಿ ಜೀವಿಸುತ್ತದೆ. ಸಾಕಿದವರ ಮನೆ ಮಾತ್ರವಲ್ಲದೇ ಪಕ್ಕದ ಮನೆಯಲ್ಲೂ ಗಲೀಜು ಮಾಡುತ್ತದೆ. ಪಕ್ಕದ ಮನೆಯವರೂ ನಾಯಿ ಮಾಡಿದ ಗಲೀಜನ್ನು ಶುಚಿಗೊಳಿಸುತ್ತಾರೆ.
ಈ ನಾಯಿ ಎಲ್ಲಿ ಬೇಕಾದರೂ ಸುಖವಾಗಿ ಮಲಗುತ್ತದೆ. ರಾಜನಂತೆ ಬದುಕುತ್ತದೆ. ಈ ಎಲ್ಲಾ ಸೌಲಭ್ಯಗಳು ಉಚಿತವಾಗಿ ದೊರೆಯುತ್ತದೆ. ವಿಪರ್ಯಾಸವೆಂದರೆ ಈ ಎಲ್ಲಾ ಖರ್ಚುಗಳನ್ನು ದಿನನಿತ್ಯ ಉದ್ಯೋಗಕ್ಕೆ ಹೋಗಿ ಸಂಪಾದಿಸುವ ವ್ಯಕ್ತಿ ಭರಿಸುತ್ತಾನೆ. ಇದೆಲ್ಲವನ್ನೂ ನೋಡುತ್ತಿದ್ದರೆ ಇಟ್ಟಿಗೆಯಿಂದ ತಲೆಗೆ ಹೊಡೆದ ಅನುಭವವಾಗುತ್ತಿದೆ.

Comments are closed.