ಕರಾವಳಿ

ಅನುಪಮಾ ಶೆಣೈ ಫೇಸ್ ಬುಕ್ ಅಕೌಂಟ್ ಹ್ಯಾಕ್ ಸಾಧ್ಯತೆ;ಉಡುಪಿಯಲ್ಲಿ ಅನುಪಮಾ ಸಹೋದರ ಹೇಳಿದ್ದೇನು ಗೊತ್ತಾ?

Pinterest LinkedIn Tumblr

ಉಡುಪಿ: ಅನುಪಮಾ ಫೇಸ್ ಬುಕ್ ಅಕೌಂಟ್ ಹ್ಯಾಕ್ ಆಗಿರಬಹುದು ಎಂದು ಆಕೆಯ ಸಹೋದರ ಅಚ್ಯುತ್ ಶೆಣೈ ಉಡುಪಿಯ ಉಚ್ಚಿಲದ ಮನೆಯಲ್ಲಿ ಹೇಳಿಕೆ ನೀಡಿದ್ದಾರೆ.

Udupi_Anupama Shenoy_Brother

(ಅಚ್ಯುತ್ ಶೆಣೈ )

ಸತತ ಒತ್ತಾಯದ ಮೇರೆಗೆ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಇಂದು ಅಥವಾ ನಾಳೆ ಅನುಪಮಾ ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾರೆ. ಎಲ್ಲಾ ವಿಷಯವನ್ನು ಆಕೆಯೇ ಸ್ಪಷ್ಟಪಡಿಸುತ್ತಾರೆ. ನಮ್ಮನೇನೂ ಕೇಳಬೇಡಿ ಎಂದಿದ್ದಾರೆ.

Anupama shenoy

ಅಕೌಂಟ್ ಹ್ಯಾಕ್ ಆಗಿದ್ದರೆ ಆಕೆಯಿಂದ ಮಾಹಿತಿ ಪಡೆದು ದೂರು ನೀಡುತ್ತೇವೆ. ಸದ್ಯಕ್ಕೆ ಅನುಪಮಾ ನಮ್ಮ ಸಂಪರ್ಕದಲ್ಲಿಲ್ಲ. ನಿನ್ನೆ ಮದ್ಯಾಹ್ನವರೆಗೆ ಶಿವಮೊಗ್ಗ ಬಂಧುಗಳ ಮನೆಯಲ್ಲಿದ್ದರು ಎಂದಿದ್ದಾರೆ. ಅನುಪಮಾ ಬಗ್ಗೆ ಬಳ್ಳಾರಿ ಅಥವಾ ಉಡುಪಿ ಪೊಲೀಸರು ಮಾಹಿತಿ ಪಡೆಯಲು ನಮ್ಮನ್ನು ಈವರೆಗೆ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.