
ಕಾಠ್ಮಂಡು: ಮಹಾರಾಷ್ಟ್ರದ ಪೊಲೀಸ್ ಇಲಾಖೆಯಲ್ಲಿ ಪೇದೆಗಳಾಗಿರುವ ವಿವಾಹಿತ ಜೋಡಿಯೊಂದು ಜಗತ್ತಿನ ಅತಿದೊಡ್ಡ ಪರ್ವತ ಮೌಂಟ್ ಎವರೆಸ್ಟ್ ಹತ್ತಿ ದಾಖಲೆ ನಿರ್ಮಿಸಿದೆ. ದಿನೇಶ್ ಮತ್ತು ತಾರಕೇಶ್ವರಿ ರಾಥೋಡ್ ಅಚ್ಚರಿಯ ಸಾಧನೆ ಮಾಡಿರುವ ದಂಪತಿ.
ತಾವು ಪರ್ವತಾರೋಹಣ ಮಾಡುವವರೆಗೂ ಪಾಲಕರಾಗುವುದು ಬೇಡ ಎಂದು ನಿರ್ಧರಿಸಿದ್ದ ಜೋಡಿ, ತಮ್ಮ 30ನೇ ವಯಸ್ಸಿನಲ್ಲಿ ಪರ್ವತವೇರಿ ಪತಾಕೆ ಹಾರಿಸಿ ಪಾಲಕರಾಗಲು ತಯಾರಾಗಿದ್ದಾರೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ರಫೀಕ್ ಶೇಖ್ ಎಂಬಾತ ಪರ್ವತ ಏರಿ ದಾಖಲೆ ಮಾಡಿದ್ದ.
2006 ರಿಂದ ಪೊಲೀಸ್ ಇಲಾಖೆಯಲ್ಲಿರುವ ದಂಪತಿ ಇದಕ್ಕೂ ಮೊದಲು ಆಸ್ಟ್ರೇಲಿಯದ ಉನ್ನತ ಶಿಖರ ಏರಿದ್ದಾರೆ. ಜತೆಗೆ ಸ್ಕೈ ಡೈವಿಂಗ್ನಂತ ಅಪಾಯಕಾರಿ ಕ್ರೀಡೆ ಹಾಗೂ ಪರ್ವತ ಏರಿಕೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಒಟ್ಟಾರೆ ಈ ವರ್ಷ 70 ಜನ ಭಾರತೀಯರು ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿದ್ದಾರೆ.
Comments are closed.