
ಕನ್ನಡ ಚಿತ್ರರಂಗದಿಂದ ದಿಢೀರ್ ನಾಪತ್ತೆಯಾದ ರಾಧಿಕಾ ಕುಮಾರಸ್ವಾಮಿ ಅವರು ಮಾಗಡಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅವರು ಅಲ್ಲೇನು ಮಾಡುತ್ತಿದ್ದಾರೆ ಎಂದರೆ, ಮಾಗಡಿಯಲ್ಲಿ ಇಟ್ಟಿಗೆ ಬ್ಯುಸಿನೆಸ್ ಶುರು ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸುತ್ತಮುತ್ತಲ ಪ್ರದೇಶಗಳಿಗೆ ಇಟ್ಟಿಗೆ ಸರಬರಾಜು ಮಾಡಲಿದ್ದಾರೆ.
ಅಂದಹಾಗೆ, ಈ ಇಟ್ಟಿಗೆ ಫ್ಯಾಕ್ಟರಿ ರಘು ಎಂಬುವವರ ಒಡೆತನದಲ್ಲಿತ್ತು. ಆ ಕಾರ್ಖಾನೆಯನ್ನು ಒಂದು ಕೋಟಿ ರೂಪಾಯಿಗೆ ಗುತ್ತಿಗೆ ಪಡೆದಿದ್ದಾರಂತೆ ರಾಧಿಕಾ ಕುಮಾರಸ್ವಾಮಿ. ರಾಧಿಕಾ ಅವರ ಸಹೋದರ ರವಿರಾಜ್ ಅವರ ಸ್ನೇಹಿತರಂತೆ ಈ ರಘು. ಆ ಮೂಲಕ ಈಗ ಇಟ್ಟಿಗೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ರಾಧಿಕಾ ಮತ್ತು ಕುಟುಂಬದವರು ಮಾಗಡಿಯ ಇಟ್ಟಿಗೆ ಕಾರ್ಖಾನೆಗೆ ಬಂದು ಪೂಜೆ ನೆರವೇರಿಸಿ, ಕಾರ್ಖಾನೆಯನ್ನು ತಮ್ಮ ಉಸ್ತುವಾರಿಗೆ ತೆಗೆದುಕೊಂಡಿದ್ದಾರೆ. ನಂತರ ರಾಧಿಕಾ ಮುಂದಿನ ದಿನಗಳಲ್ಲಿ ಮಾಗಡಿ ಸುತ್ತಮುತ್ತ ಜಮೀನು ಖರೀದಿಸಲು ಚಿಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಅವರು ಕನ್ನಡ ಚಿತ್ರರಂಗದಿಂದ ದೂರ ಆಗುತ್ತಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.
Comments are closed.