
ಬೆಂಗಳೂರು: ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ದೇಶದ ವಿವಿಧ ನಗರಗಳು ಸ್ಪರ್ಧೆಗಿಳಿದಿದ್ದು, ಬಿಬಿಎಂಪಿ ಕೂಡ ಸ್ಮಾರ್ಟ್ ಸಿಟಿ ಪಟ್ಟ ಪಡೆಯಲು ಹೆಸರಾಂತ ನಟ ಸುದೀಪ್ ಅವರನ್ನು ಸ್ಮಾರ್ಟ್ ಸಿಟಿ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.
ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಅವರು ನೇರವಾಗಿ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ. ಸುದೀಪ್ ಕೂಡ ರಾಯಭಾರಿಯಾಗಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಬಿಬಿಎಂಪಿ, ಇದೀಗ ಎರಡನೇ ಸುತ್ತಿನಲ್ಲಾದರೂ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದೆ.
ಘನತ್ಯಾಜ್ಯ ವಿಲೇವಾರಿ ಸಂಬಂಧ ಜನರಲ್ಲಿ ಜಾಗೃತಿ ಉಂಟು ಮಾಡುವುದು ಒಳಗೊಂಡಂತೆ ಸ್ಮಾರ್ಟ್ ಸಿಟಿ ಸಂಬಂಧ ಬಿಬಿಎಂಪಿಯ ಜಾಹೀರಾತುಗಳಿಗೆ ಸುದೀಪ್ ಪುಕ್ಕಟೆಯಾಗಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
Comments are closed.